ವಾಹನ ಚಾಲಕರಿಗೆ ಲಾಠಿ ರುಚಿ

ಕಲಬುರಗಿ ಮಾ 24:ಕರ್ನಾಟಕದಲ್ಲಿ ಕೋವಿಡ್ 19 ಪ್ರಕರಣಗಳು ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮಾರ್ಚ 31 ರವರೆಗೆ ಕಫ್ರ್ಯೂ ಮಾದರಿಯ ಕಠಿಣ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಅನಗತ್ಯವಾಗಿ ರಸ್ತೆಗಳಲ್ಲಿ ಜನರು ಸಂಚಾರ ಮಾಡುವದನ್ನು ನಿರ್ಬಂಧಿಸಲಾಗಿದೆ.
ನಗರದಲ್ಲಿ ಇಂದು ರಸ್ತೆಗಳಲ್ಲಿ ಬೈಕು, ಕಾರು ಇತ್ಯಾದಿಗಳಲ್ಲಿ ಪ್ರಯಾಣಿಸುತ್ತಿದ್ದವರನ್ನು ಪೊಲೀಸರು ವಿಚಾರಿಸಿ ಮನೆಗೆ ವಾಪಸ್ಸು ಕಳಿಸುತ್ತಿರುವದು ಕಂಡು ಬಂತು. ಬೈಕ್ಗಳಲ್ಲಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.ಬೈಕುಗಳಲ್ಲಿ ಸಂಚರಿಸುವ ಕೆಲವರು ಪೊಲೀಸರಿಗೆ ತಮ್ಮ ಐಡೆಂಟಿಟಿ ಕಾರ್ಡು ತೋರಿಸುತ್ತಿರುವದು ಕಂಡು ಬಂತು.
ಇಂದಿನಿಂದ ನಗರದಲ್ಲಿ ಆಟೋ ಸಂಚಾರಕ್ಕೆ ಸಹ ನಿರ್ಬಂಧ ವಿಧಿಸಲಾಗಿದ್ದು, ಆಸ್ಪತ್ರೆ ಇತ್ಯಾದಿ ತುರ್ತು ಮತ್ತು
ಅತ್ಯಗತ್ಯ ಕೆಲಸಗಳಿಗೆ ಹೊರ ಹೋಗುವ ಸಾಮಾನ್ಯರಿಗೆ ಆತಂಕ ಎದುರಾಗಿದೆ..

Leave a Comment