ವಾಹನಗಳ ಸಂಚಾರ ಎಂದಿನಂತೆಯೇ

ಗದಗ, ಜ 8- ಜಿಲ್ಲೆಯಲ್ಲಿಯೂ ಸಾಮಾನ್ಯ ಜನಜೀವನದ ಮೇಲೆ ಬಂದ್‌ನ ಪರಿಣಾಮ ಯಾವುದೇ ತೆರನಾಗಿ ಬೀರಿದುದು ಕಂಡುಬರಲಿಲ್ಲ.
ಬಸ್‌ಗಳ ಸಂಚಾರ ಸ್ಥಗಿತಗೊಂಡುದುದನ್ನು ಹೊರತುಪಡಿಸಿದರೆ ಅಟೋ ಮತ್ತಿತರ ಖಾಸಗಿ ವಾಹನಗಳ ಸಂಚಾರ ಎಂದಿನಂತೆಯೇ ನಡೆದಿತ್ತು.
ಗದಗ ನಗರದ ಜನರಲ್ ಕಾರ್ಯಪ್ಪ ವೃತ್ತದಲ್ಲಿ ಹಲವಾರು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಗಳ ಧುರೀಣರು ಕೇಂದ್ರ ಸರ್ಕಾರದ ಕಾರ್ಯ ವೈಖರಿಯನ್ನು ಖಂಡಿಸಿದರಲ್ಲದೇ, ಬೇಡಿಕೆಗಳನ್ನು ಈಡೇರಿಸಬೇಕೆಂಬ ಆಗ್ರಹವನ್ನು ವ್ಯಕ್ತಪಡಿಸಿದರು.

Leave a Comment