ವಾಹನಗಳ ಮೇಲಿನ ನಾಮಫಲಕ ತೆರವು

ಬೆಂಗಳೂರು, ಡಿ. ೨೯- ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಡಾ.ಧನ್ವಂತರಿ ಎಸ್. ವೂಡೆಯರ್ ಮತ್ತು ಮಲ್ಲೇಶ್ ಅವರ ನೇತೃತ್ವದ ತಂಡ ಇಂದು ತಾಲ್ಲೂಕಿನಾದ್ಯಂತ ಕಾರ್ಯಾಚರಣೆ ನಡೆಸಿ ವಾಹನಗಳ ನೊಂದಣಿ ಫಲಕಗಳ ಮೇಲೆ ವಿವಿಧ ಸಂಘ ಸಂಸ್ಥೆಗಳ ಹೆಸರು ದೇವರ ಹೆಸರು ಬರೆಸಿರುವುದನ್ನು ತೆರವುಗೊಳಿಸಿ ವಾಹನ ಮಾಲೀಕರುಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ನೂರಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಲಾಯಿತು. ಹಾಗೂ ವಾಹನ ಮಾಲೀಕರಿಗೆ ನೋಟಿಸ್ ನೀಡಿದ್ದರು.  ಕೇಂದ್ರ ಮೋಟಾರು ವಾಹನಗಳ ನಿಯಮ 1989ರ 50/51 ರ ಪ್ರಕಾರ ನೊಂದಣಿ ಫಲಕಗಳ ಮೇಲೆ ಹೆಸರು ಅಥವಾ ಚಿಹ್ನೆಗಳನ್ನು ಬಳಸುವುದು ಕಾನೂನಿಗೆ ವಿರುದ್ಧವಾದದ್ದು ಸಾರ್ವಜನಿಕರು ಈ ನಿಯಮ ಪಾಲಿಸಬೇಕು ಇಲ್ಲದಿದ್ದಲ್ಲಿ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ವಾಹನ ನಿರೀಕ್ಷಕ ಡಾ.ಧನ್ವಂತರಿ ಎಸ್. ವೂಡೆಯರ್ ಅವರು ತಿಳಿಸಿದರು.

Leave a Comment