ವಾಲ್ಮೀಕಿ ಸಮುದಾಯ : ಮೀಸಲು ಚರ್ಚೆ ಸಭೆ

ರಾಯಚೂರು.ಜೂ.16- ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಸಭೆ ಕರೆದಿದ್ದು, ಈ ಸಭೆಗೆ ಹಾಜರಾಗುವುದಾಗಿ ಶಾಸಕರಾದ ರಾಜುಗೌಡ ಮತ್ತು ಪ್ರತಾಪಗೌಡ ಪಾಟೀಲ್ ಅವರು ಹೇಳಿದರು.
ಅವರು ಖಾಸಗಿ ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ತೀವ್ರ ಒತ್ತಡವೇರಲಾಗುತ್ತಿದೆ. ಈ ಕುರಿತು ಸಮುದಾಯದಿಂದ ಪ್ರತಿಭಟನೆ ನಡೆದಿವೆ. ಈಗ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಲು ಸಭೆ ಕರೆದಿದೆ. ಈ ಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿ, ಸಾಧಕ-ಬಾಧಕ ಚರ್ಚೆ ನಡೆಯಲಿವೆ. ಈ ಸಭೆಯಲ್ಲಿ ಪಾಲ್ಗೊಂಡು ಸಮುದಾಯದಕ್ಕೆ ಮೀಸಲು ಹೆಚ್ಚಿಸುವಂತೆ ಒತ್ತಾಯಿಸಲಾಗುತ್ತದೆಂದು ಹೇಳಿದರು.

Leave a Comment