ವಾಲಿಬಾಲ್ ಪಂದ್ಯಾವಳಿ ಫಲಿತಾಂಶ

ಧಾರವಾಡ,ಸೆ.11- ಶಹರ ತಾಲೂಕಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಧಾರವಾಡದ ಮಹಾವಿದ್ಯಾಲಯವಾದ ಜೆ.ಎಸ್.ಎಸ್.ಆರ್.ಎಸ್. ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯದ ಬಾಲಕ ಮತ್ತು ಬಾಲಕಿಯರು ವಿಜೇತರಾಗಿದ್ದು, ವಿಜೇತ ತಂಡದ ಸದಸ್ಯರಿಗೆ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ನ. ವಜ್ರಕುಮಾರ, ವಿತ್ತಾಧಿಕಾರಿಗಳಾದ ಡಾ.ಅಜಿತ ಪ್ರಸಾದ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ. ಭಾರತಿ ಶಾನಭಾಗ, ದೈಹಿಕ ನಿರ್ದೇಶಕರುಗಳಾದ ಶ್ರೀ.ಜಿನೇಂದ್ರ ಕುಂದಗೋಳ, ಶ್ರೀ.ಶ್ರವಣಕುಮಾರ ಯೋಗಿ, ಶ್ರೀ. ಗಣೇಶ ನಾಯ್ಕ ಮತ್ತು ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Comment