ವಾರ್ಡ್ 30 : ಬಡ ಕುಟುಂಬ – ದಿನಸು, ಕಾಯಿಪಲ್ಲೆ ವಿತರಣೆ

ರಾಯಚೂರು.ಏ.06- ವಾರ್ಡ್ ನಂ.30ರ ನಗರಸಭೆ ಸದಸ್ಯರಾದ ವೆಂಕಟಮ್ಮ ಎನ್.ಶ್ರೀನಿವಾಸ ರೆಡ್ಡಿ ಇವರ ನೇತೃತ್ವದಲ್ಲಿ ವಾರ್ಡಿನ ಬಡವರಿಗೆ ದಿನಬಳಕೆಯ ದಿನಸು ಕಾಯಪಲ್ಲೆ ಮತ್ತು ಹಾಲು ವಿತರಿಸಿ, ನೆರವಾಗಿದ್ದಾರೆ.
ಶಾಸಕ ಡಾ.ಶಿವರಾಜ ಪಾಟೀಲ್ ಇವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಡ ಕುಟುಂಬದವರಿಗೆ ಅಕ್ಕಿ, ಬೇಳೆ, ಕಾರ-ಉಪ್ಪು, ಎಣ್ಣೆ ಸೇರಿದಂತೆ ಇನ್ನಿತರ ದಿನಸು ಒಳಗೊಂಡಂತೆ ಅಗತ್ಯ ವಸ್ತು ನೀಡಲಾಯಿತು. ಕಾಯಿಪಲ್ಲೆಯೂ ಸಹ ಬಡವರಿಗೆ ವಿತರಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಮನೆ ಮನೆಗೆ ಟೋಕನ್ ನೀಡಿ, ಬಡಾವಣೆಯೊಂದರ ಗೋಡಾನಿಂದ ಈ ದಿನಸು ವಿತರಿಸಲಾಯಿತು.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ದಿನಸು ವಿತರಣೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಎನ್.ಕೇಶವರೆಡ್ಡಿ, ತಿಮ್ಮಪ್ಪ ನಾಡಗೌಡ, ರವೀಂದ್ರ ಜಲ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment