ವಾರ್ಡ್ 27 : 70 ಲಕ್ಷ ಕಾಮಗಾರಿಗೆ ಚಾಲನೆ

ರಾಯಚೂರು.ಜ.20- ನಗರದ ವಾರ್ಡ್ ನಂ.27 ರಲ್ಲಿ ಗಂಜ್ ವೃತ್ತದಿಂದ ಕಲ್ಯಾಣ ಮಂಟಪದವರೆಗೂ 70 ಲಕ್ಷ ರೂ. ಅನುದಾನದಡಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ಎನ್.ಶ್ರೀನಿವಾಸ ರೆಡ್ಡಿ ಮತ್ತು ಪೋಗಲ್ ಶ್ರೀನಿವಾಸ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ.ಶಿವರಾಜ ಪಾಟೀಲ್ ಅವರು, ನಗರ ಎಲ್ಲಾ ರಸ್ತೆಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಬಡಾವಣೆಗಳಿಗೂ ವಿವಿಧ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗಿದೆ. ನಗರಸಭೆ ಸದಸ್ಯರ ಸಲಹೆ ಸೂಚನೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಗುಣಮಟ್ಟದಿಂದ ಇದನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹೇಂದ್ರ ರೆಡ್ಡಿ, ಬಲ್ಲಟಗಿ ಶರಣ ಬಸಪ್ಪ, ಟಿ.ಶ್ರೀನಿವಾಸ ರೆಡ್ಡಿ, ವೀರೇಶ ಬೂತಪ್ಪ, ವೈ.ಗೋಪಾಲರೆಡ್ಡಿ. ತಿಮ್ಮಪ್ಪ ನಾಡಗೌಡ, ಭೀಮರೆಡ್ಡಿ, ಗುಡ್ಸಿ ನರಸಿಂಹಲು, ಕೆ.ರವಿ, ಎಂ.ತಿಮ್ಮಾರೆಡ್ಡಿ, ಶೇಖರ ರೆಡ್ಡಿ, ಬಿ.ಈರಣ್ಣ, ದಳವಾಯಿ ವೀರೇಶ, ಕುರ್ಡಿ ನರಸಿಂಹ ನಾಯಕ, ಜಿ.ತಿಮ್ಮಾರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment