ವಾರ್ಡ್.2 ಕೆ.ಅಂಜಿನೇಯ ಜಾದಳ ಟಿಕೆಟ್ ಆಕಾಂಕ್ಷಿ

ರಾಯಚೂರು.ಆ.10- ವಾರ್ಡ್.2 ರಲ್ಲಿ ಅನೇಕ ವರ್ಷಗಳಿಂದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗುವ ಮೂಲಕ ಜನರ ಮಧ್ಯೆ ಗುರುತಿಸಿಕೊಂಡಿರುವ ಕೆ. ಅಂಜಿನೇಯ ತಂದೆ ಮಲ್ಲೇಶ ನಗರಸಭೆ ಚುನಾವಣೆಯ ಜಾದಳ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇಂದು ಪಕ್ಷದ ಕಚೇರಿಯಲ್ಲಿ ಮಹಾಂತೇಶ ಪಾಟೀಲ್ ಅತ್ತನೂರು, ಎಂ.ವಿರುಪಾಕ್ಷಿ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಜಾದಳ ಪಕ್ಷ ಸೇರ್ಪಡೆಗೊಳ್ಳುವ ಮೂಲಕ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಮಕೃಷ್ಣ, ಈರಣ್ಣ ಯಾದವ್, ಅಜೀತ್ ಸೇಠ್, ಈ. ಕುಮಾರ್ ಸ್ವಾಮಿ, ಅಮ್ಜದ್, ರವಿ ಯಾದವ್, ಆವಿಲ್ ಕುಮಾರ್, ಚಾಂದ್ ಪಾಷಾ, ರಾಮು, ಪ್ರಭಾಕರ ಪಾಸ್ಟರ್, ನರಸಿಂಹ, ಸಲ್ಮಾನ್ ಸ್ಟ್ಯಾಲಿನ್ ಅವರು ಉಪಸ್ಥಿತರಿದ್ದರು.
ವಾರ್ಡ್.2ರಲ್ಲಿ ಕೆ. ಅಂಜಿನೇಯ ಅವರು ಅನೇಕ ವರ್ಷಗಳಿಂದ ಉತ್ತಮ ಜನ ಸಂಪರ್ಕ ಹೊಂದಿದ್ದಾರೆ. ಸಾಮಾಜಿಕ ಚಟುವಟಿಕೆಗಳೊಂದಿಗೆ ರಾಜಕೀಯವಾಗಿಯೂ ಗುರುತಿಸಿಕೊಂಡವರಾಗಿದ್ದಾರೆ. ಛಲವಾದಿ ಸಮುದಾಯದ ಮುಖಂಡರಾಗಿ ತಮ್ಮದೇಯಾದ ಸಂಘಟನಾ ಶಕ್ತಿ ಹೊಂದಿದವರಾಗಿದ್ದರಿಂದ ಅವರು ಈ ಚುನಾವಣೆಯಲ್ಲಿ ಜಾದಳ ಅಭ್ಯರ್ಥಿ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದರು. ಪಕ್ಷದ ಮುಖಂಡರು ಸಹ ಇವರ ಪರ ಹೆಚ್ಚಿನ ಒಲವು ಹೊಂದಿದ್ದಾರೆ. ಈಗಾಗಲೇ ಅಂಜಿನೇಯ ಅವರು ವಾರ್ಡ್‌ನಲ್ಲಿ ಜನ ಸಂಪರ್ಕ ಸಭೆಯನ್ನು ಆರಂಭಿಸಿದ್ದಾರೆ.

Leave a Comment