ವಾರ್ಡ್ 19: ಶಾಸಕರಿಂದ ಭರ್ಜರಿ ಪ್ರಚಾರ

ರಾಯಚೂರು.ಆ.26- ನಗರಸಭೆ ಚುನಾವಣೆ ವಾರ್ಡ್ 19 ರ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಅಂಜಿನಮ್ಮ ಆರ್.ಆಂಜಿನೇಯ್ಯ ರವರ ಪರ ಶಾಸಕ ಡಾ.ಶಿವರಾಜ್ ಪಾಟೀಲ್ ಅವರು ಇಂದು ಭರ್ಜರಿ ಪ್ರಚಾರ ನಡೆಸಿದರು.
ಶಾಸಕ ಡಾ.ಶಿವರಾಜ್ ಪಾಟೀಲ್ ಅವರು, ನೂರಾರು ಬೆಂಬಲಿಗರೊಂದಿಗೆ ಬೃಹತ್ ಪಾದಯಾತ್ರೆ ಮೂಲಕ ಮನೆ-ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯಾದ ಅಂಜಿನಮ್ಮ ಅವರಿಗೆ ಮತ ಚಲಾಯಿಸುವಂತೆ ಕರಪತ್ರ ನೀಡಿ ಮತ ಯಾಚಿಸಿದರು. ಆ.31 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರು ಬಿಜೆಪಿ ಚಿಹ್ನೆವುಳ್ಳ ಕಮಲಕ್ಕೆ ಮತ ಚಲಾಯಿಸಿ, ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಗಿರೀಶ್ ಕನಕವೀಡು, ಆರ್.ಆಂಜಿನೇಯ್ಯ, ಕೆ.ಪಿ.ಅನೀಲ್ ಕುಮಾರ್, ಚಂದ್ರು ಬಂಡಾರಿ, ಜನಾರ್ಧನ ಹಳ್ಳಿಬೆಂಚಿ, ಗೋಪಾಲ ಖಾನಾಪುರ, ರಾಮು ಸೇರಿದಂತೆ ಬಡಾವಣೆಯ ಮಹಿಳೆಯರು, ಯುವಕರು ಪ್ರಚಾರದಲ್ಲಿ ಭಾಗವಹಿಸಿದ್ದರು.

Leave a Comment