ವಾರ್ಡ್ 19 : ರವಿ ಬೋಸರಾಜರಿಂದ ಪ್ರಚಾರ

ರಾಯಚೂರು.ಆ.28- ನಗರಸಭೆ ಚುನಾವಣೆ ವಾರ್ಡ್ 19 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೇಮಲತಾ ಪಿ.ಬೂದೆಪ್ಪ ಅವರ ಪರ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಭರ್ಜರಿ ಪ್ರಚಾರ ನಡೆಸಿದರು.
ವಾರ್ಡ್ 19ರ ವ್ಯಾಪ್ತಿಯಲ್ಲಿ ಬರುವ ನವಾಬ್ ಗಡ್ಡದ ಶ್ರೀ ಆಂಜಿನೇಯ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಅಭ್ಯರ್ಥಿ ಪರ ಪ್ರಚಾರದಲ್ಲಿ ನಿರತರಾದರು. ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ರವಿ ಬೋಸರಾಜು ಅವರು, ಬೃಹತ್ ರೋಡ್ ಶೋ ಮೂಲಕ ಮನೆ ಮನೆಗೆ ತೆರಳಿ ಕರಪತ್ರ ನೀಡಿ ಹೇಮಲತಾ ಪಿ.ಬೂದೆಪ್ಪ ಅವರಿಗೆ ಮತ ಚಲಾಯಿಸಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ರವಿ ಬೋಸರಾಜು ಅವರು ಹರಿಜನವಾಡ ಬಡಾವಣೆಗೆ ಭೇಟಿ ನೀಡಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಂತೆ ಕಾರ್ಯಕರ್ತರು ಭುಜದ ಮೇಲೆತ್ತಿ ಜಯಘೋಷ ಹಾಕಿದರು. ನಗರಾಧ್ಯಕ್ಷ ಜಿ.ಬಸವರಾಜ ರೆಡ್ಡಿ, ಪಿ.ಬೂದೆಪ್ಪ, ಪಿ.ತೇಜಪ್ಪ, ಪಿ.ಬೋಳಬಂಡಿ, ಪಿ.ಆಶಣ್ಣ, ಮಲ್ಲೇಶ, ಬಂಗಾರಯ್ಯ ತಾತಾ, ಈಶ್ವರಪ್ಪ, ಪ್ರಕಾಶ, ಜೇಗರಕಲ್ ನಾಗಪ್ಪ, ವೆಂಕಟೇಶ, ಬಿ.ಗೋವಿಂದ, ಜೆಗ್ಲಿ ಗೋವಿಂದು, ಪಿ.ಶ್ರವಣ್‌ಕುಮಾರ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.

Leave a Comment