ವಾರ್ಡ್.17 ಬ್ರಾಹ್ಮಣ ಸಮುದಾಯಕ್ಕೆ ಟಿಕೆಟ್ ಭರವಸೆ

ರಾಯಚೂರು.ಆ.10- ನಗರದ ವಾರ್ಡ್ 17 ರಲ್ಲಿ ಅತ್ಯಾಧಿಕ ಸಂಖ್ಯೆಯಲ್ಲಿ ಬ್ರಾಹ್ಮಣ ಸಮುದಾಯದ ಮತದಾರರಿರುವುದರಿಂದ ಈ ನಗರಸಭೆ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಟಿಕೇಟ್ ನೀಡುವಂತೆ ನಗರ ಗ್ರಾಮೀಣ ಅಧ್ಯಕ್ಷ ಸುಧೀಂದ್ರ ಜಾಗೀರ್ದಾರ್ ಅವರು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ ಗುಂಡೂರಾವ್ ಅವರಿಗೆ ಮನವಿ ಮಾಡಿದರು.
ಬ್ರಾಹ್ಮಣ ಸಮುದಾಯಕ್ಕೆ ಟಿಕೆಟ್ ನೀಡುವ ಮನವಿಗೆ ಸ್ಪಂದಿಸಿದ ದಿನೇಶ ಗುಂಡೂರಾವ್ ಅವರು ವಾರ್ಡ್ 17 ಕ್ಕೆ ಬ್ರಾಹ್ಮಣರಿಗೆ ಟಿಕೆಟೆ ದೊರಕಿಸಿಕೊಡುವ ಭರಸವೆ ನೀಡಿದ್ದಾರೆ. ಈ ಸಂಬಂಧ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.
4500 ಮತದಾರರನ್ನು ಹೊಂದಿದ ವಾರ್ಡ್ 17 ರಲ್ಲಿ 2500 ಬ್ರಾಹ್ಮಣ ಸಮುದಾಯ ಮತದಾರರಿದ್ದಾರೆ. ಇಲ್ಲಿವರೆಗೂ ಈ ವಾರ್ಡ್‌ನಿಂದ ಕಾಂಗ್ರೆಸ್ ಪಕ್ಷದಿಂದ ಬ್ರಾಹ್ಮಣ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಅಪಾರ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ವರು ಕೋರಿದ್ದಾರೆ. ಭದ್ರಿನಾಥ್ ಜೆ.ಕೆ. ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಇವರಿಗೆ ಟಿಕೆಟ್ ನೀಡಿ, ಸಮುದಾಯದ ಪ್ರಾತಿನಿಧ್ಯ ನೀಡುವಂತೆ ಕೋರಲಾಗಿತ್ತು.
ಇದಕ್ಕೆ ದಿನೇಶ ಗುಂಡೂರಾವ್ ಅವರು ಪೂರಕವಾಗಿ ಸ್ಪಂದಿಸಿ, ಎಲ್ಲಾ ಜಾತಿಗಳಿಗೂ ಟಿಕೆಟ್ ದೊರೆಯುವಂತೆ ಕಾಂಗ್ರೆಸ್ ಪಕ್ಷ ಸದಾ ಗಮನ ಹರಿಸುತ್ತದೆ. ಬ್ರಾಹ್ಮಣ ಸಮುದಾಯದ ಮತದಾರರು ಅತ್ಯಾಧಿಕ ಸಂಖ್ಯೆಯಲ್ಲಿರುವುದರಿಂದ ಆ ಸಮುದಾಯಕ್ಕೆ ಟಿಕೆಟ್ ದೊರೆಯುವ ಭರವಸೆ ನೀಡಿದ್ದಾರೆ. ಭದ್ರಿ ನಾಥ ಅವರು ವಾರ್ಡ್ 17 ರಲ್ಲಿ ವಿವಿಧ ಚಟುವಟಿಕೆಯಲ್ಲಿ ಜನ ಸಂಪರ್ಕ ಹೊಂದಿದವರಾಗಿದ್ದರಿಂದ ಅವರಿಗೆ ಟಿಕೆಟ್ ನೀಡಿದರೆ ಅನುಕೂಲವಾಗುತ್ತದೆ ಎನ್ನುವುದು ಸಮಾಜದ ಮುಖಂಡರ ಒಟ್ಟಾಭಿಪ್ರಾಯಕ್ಕೆ ದಿನೇಶ ಗುಂಡೂರಾವ್ ಅವರು ಸ್ಪಂದಿಸಿದ್ದಾರೆ.

Leave a Comment