ವಾರ್ಡ್ 16 : ಬಡವರಿಗೆ ಹರೀಶ್ ನಾಡಗೌಡರ ನೆರವು

ರಾಯಚೂರು.ಮಾ.03- ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಉಂಟಾದ ತೀವ್ರ ತೊಂದರೆ ನಿವಾರಿಸಲು ನಗರಸಭೆ ಸದಸ್ಯರಾದ ಹರೀಶ್ ನಾಡಗೌಡ ಅವರು ಇಂದು ಅಲ್ಲಿಯ ಬಡವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.
ವಾರ್ಡ್ ನಂ.16 ರಲ್ಲಿ ಸಾಕಷ್ಟು ಜನ ಬಡವರಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿರ್ವಹಿಸುವುದು ತೊಂದರೆಯಾಗಿದೆ. ಸ್ಥಳೀಯವಾಗಿ ಜನರ ಸಂಕಷ್ಟ ಅರಿತ ಅವರು, ಇಂದು ಮನೆ ಮನೆಗೆ ತೆರಳಿ, ಅಗತ್ಯ ವಸ್ತುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡಾವಣೆ ಜನರ ಯಾವುದೇ ಸಂಕಷ್ಟದಲ್ಲಿ ನಾನು ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಅವರಿಗಾಗಿ ಎಲ್ಲಾ ರೀತಿಯ ನೆರವು ನೀಡಲು ಸಿದ್ಧರಾಗಿರುವುದಾಗಿ ಹೇಳಿದರು.
ನನ್ನ ಬಡಾವಣೆಯಲ್ಲಿ ಯಾರು ಸಹ ತೊಂದರೆ ಎದುರಿಸಬಾರದು ಎನ್ನುವುದು ನನ್ನ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ದಿನಸು ವಿತರಿಸುವುದಾಗಿ ತಿಳಿಸಿದರು.

Leave a Comment