ವಾರ್ಡ್ ನಂ.7 : 15 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ

ರಾಯಚೂರು.ಫೆ.13- ನಗರದ ವಾರ್ಡ್ ನಂ.7ರಲ್ಲಿ ವಿವಿಧ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಚಾಲನೆ ನೀಡಿದರು.
ಅಲ್ಪಸಂಖ್ಯಾತರ ಬಡವರಿಗಾಗಿ ಕೊಳಚೆ ಪ್ರದೇಶದಲ್ಲಿ ಹಾಗೂ ಅತಿ ಹೆಚ್ಚು ವಾಸವಾಗಿರುವ ಮುಸ್ಲೀಂ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಿದೆ. ಕುಡಿವ ನೀರು, ಸಿಸಿ ರಸ್ತೆ, ಚರಂಡಿ ಹಾಗೂ ಇನ್ನಿತರ ಕಾಮಗಾರಿಗೆ 3 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, 20 ವಾರ್ಡ್ ಆಯ್ಕೆ ಮಾಡಿಕೊಂಡು ತಲಾ ಒಂದು ವಾರ್ಡ‌ಗೆ 15 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆಂದು ಹೇಳಿದ ಅವರು, ಜಿ.ತಿಮ್ಮಾರೆಡ್ಡಿ ಅವರು ಗುಣಮಟ್ಟದ ಕಾಮಗಾರಿ ಕೈಗೊಳ್ಳಲೆಂದು ಸಲಹೆ ನೀಡಿದರು.
ದೇಶದಲ್ಲಿ ಎಲ್ಲಿಯಾದರೂ, ಕೋಮು ಗಲಭೆ ನಡೆದರೂ, ರಾಯಚೂರಿನಲ್ಲಿ ಮಾತ್ರ ಯಾವುದೇ ಅಹಿತಕರ ಘಟನೆ ನಡೆಯಲು ಜನ ಅವಕಾಶ ನೀಡುವುದಿಲ್ಲ. ಕಾರಣ ಇಲ್ಲಿ ಜನ ಸೌಹಾರ್ದ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್‌ಸಿ ಹಾಗೂ ಎನ್‌ಪಿಆರ್ ಅಸಂಬದ್ಧ ಕಾರ್ಯಗಳಾಗಿವೆಂದು ಟೀಕಿಸಿದರು. ವೇದಿಕೆಯಲ್ಲಿ ಜಿ.ಶಿವಮೂರ್ತಿ, ಜಯಣ್ಣ, ಶಾಂತಪ್ಪ, ಎನ್.ಶ್ರೀನಿವಾಸರೆಡ್ಡಿ, ಸಾಜೀದ್ ಸಮೀರ್, ರುದ್ರಪ್ಪ ಅಂಗಡಿ, ಸುನೀಲ್ ಕುಮಾರ, ಅಫ್ಜಲ್ ಅಲಿ ನಾಯಕ, ಅಬ್ದುಲ್ ಕರೀಂ, ಅಲಹಜ್ ಮೌಲಾನಾ, ಮೊಹ್ಮದ್, ಮಹ್ಮದ್ ಜುಬೇರ್, ಹುಸೇನ್, ಹಫೀಜ್, ಸಾಜೀದ್ ಬಾಯ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment