ವಾರ್ಡ್ ಗಳ ಅಭಿವೃದ್ದಿಗೆ ಆದ್ಯತೆ-ಶಾಸಕ ರಾಮಪ್ಪ ಭರವಸೆ

ಹರಿಹರ:ಸೆ. 7- ಕತ್ತಲಿನಿಂದ ಬೆಳಕಿನಡೆಗೆ ನಡೆಯುವಂತೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಹೈಮಾಸ್ಟ್ ವಿದ್ಯುತ್ ದೀಪಕ್ಕೆ ಶಾಸಕ ಎಸ್.ರಾಮಪ್ಪ ಸ್ವಿಚ್ ಆನ್ ಮಾಡುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ನಗರಸಭೆಯಿಂದ 14ನೇ ಹಣಕಾಸು ಯೋಜನೆಯಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಹೈಮಾಸ್ಟ್ ವಿದ್ಯುತ್ ದೀಪಕ್ಕೆ ಚಾಲನೆ ನೀಡಲಾಗಿದೆ. ಈ ಮೈದಾನದಲ್ಲಿ ಸುಮಾರು ದಿನಗಳಿಂದ ಕತ್ತಲು ಆವರಿಸಿದ್ದು ಹೈಸ್ಕೂಲ್ ಬಡಾವಣೆ ಮತ್ತು ಅಕ್ಕಪಕ್ಕದ ಬಡಾವಣೆಯ ನಿವಾಸಿಗಳು ವಾಯುವಿಹಾರಕ್ಕೆ ಬರುತ್ತಾರೆ. ಮತ್ತು ಈ ಮೈದಾನದಲ್ಲಿ ಶಾಲಾ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಈ ಮೈದಾನದಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ನಗರದ ವಿವಿಧ ವಾರ್ಡ್ ಗಳಲ್ಲಿ ಒಟ್ಟು 12 ಶುದ್ಧ ಕುಡಿಯುವ ನೀರಿನ ಘಟಕಗಳು ಕಾಮಗಾರಿ ಹಂತದಲ್ಲಿದ್ದು 30,10,16,19 ವಾರ್ಡ್ ಗಳಲ್ಲಿ ಘಟಕಗಳಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಾರ್ವಜನಿಕರು ಉಪಯೋಗಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹೇಳಿದರು.
ಇನ್ನುಳಿದಂತೆ ನ್ಯೂನ್ಯತೆಯಿರುವ ವಾರ್ಡ್ ಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು ಸ್ವಚ್ಚತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ ಇತರೆ ಮೂಲಭೂತ ಸೌಕರ್ಯಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಸುಜಾತ ಬಿ ರೇವಣಸಿದ್ದಪ್ಪ, ಸದಸ್ಯರುಗಳಾದ ಎಸ್‍ಎಂ.ವಸಂತ, ಶಂಕರ್ ಕಟಾವ್ ಕರ್, ಕೆ.ಮರಿದೇವ್, ಬೆಳ್ಳೂಡಿ ಬಸವರಾಜ್, ಸಿ.ಎನ್.ಹುಲಿಗೇಶ್, ಅಜ್ಜಯ್ಯ, ಸಿದ್ದಲಿಂಗಸ್ವಾಮಿ, ಬಿ.ರೇವಣಸಿದ್ದಪ್ಪ, ನಾಗರಾಜ್, ಇಂಜಿನಿಯರ್ ಸಿಬಿ ಮಾಲತೇಶ್ ಇತರರು ಉಪಸ್ಥಿತರಿದ್ದರು.

Leave a Comment