ವಾರಾಂತ್ಯಕ್ಕೆ ಬೃಹತ್ ಕಾಶ್ಮೀರ ಸಮಾವೇಶ: ಪಾಕ್ ಪ್ರಧಾನಿ

ಇಸ್ಲಾಮಾಬಾದ್, ಸೆ 11 – ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಾರಾಂತ್ಯಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿರುವುದಾಗಿ ಪ್ರಕಟಿಸಿದ್ದಾರೆ.
ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, “ಸೆಪ್ಟೆಂಬರ್ 13ರಂದು ಪಾಕಿಸ್ತಾನ ಆಡಳಿತವಿರುವ ಕಾಶ್ಮೀರದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು” ಎಂದಿದ್ದಾರೆ
ಒಗ್ಗಟ್ಟಿನ ಈ ಸಮಾವೇಶವು ಭಾರತದ ಕಾಶ್ಮೀರದಲ್ಲಿ ಮುಂದುವರೆಸುತ್ತಿರುವ ‘ಮುತ್ತಿಗೆ’ ಬಗ್ಗೆ ಜಗತ್ತಿಗೆ ಸಂದೇಶ ರವಾನಿಸುತ್ತದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಮ್ಮು ಕಾಶ್ಮಿರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರ ಹಾಗೂ ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು.

Leave a Comment