ವಾಯು ಮಾಲಿನ್ಯದಿಂದ ಚರ್ಮ ರಕ್ಷಣಾ ಸೂತ್ರ

ಪರಿಸರ ಮಾಲಿನ್ಯ ಮತ್ತು ಗಾಳಿಯಲ್ಲಿ ವಿಷತ್ವ ನಮ್ಮ ಚರ್ಮ ಮತ್ತು ಅದರ ವಯಸ್ಸಾಗುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ನಮ್ಮ ಚರ್ಮಕ್ಕೆ ಹಾನಿಯಾಗುವ ಪ್ರಮುಖ ಕಾರಣಗಳಲ್ಲಿ ಮಾಲಿನ್ಯ ಕೂಡ ಒಂದು.

ಮಾಲಿನ್ಯವು ಕೊಲಾಜೆನ್ ಪ್ರೋಟೀನ್ ಉತ್ಪಾದನೆ ಕುಗ್ಗಿಸುತ್ತದೆ, ವಿಪರೀತ ಮಚ್ಛೆಗಳು, ಅಕಾಲಿಕ ಸುಕ್ಕುಗಳು, ಶುಷ್ಕತೆ, ಎಸ್ಜಿಮಾ ಉಂಟುಮಾಡುತ್ತದೆ ಮತ್ತು ಚರ್ಮವನ್ನ ಮತ್ತಷ್ಟು ಸೂಕ್ಷ್ಮಗೊಳಿಸುತ್ತದೆ. ಗಾಳಿಯಲ್ಲಿರುವ ಮಾಲಿನ್ಯಕಾರಕಗಳು ನಮ್ಮ ಡಿಎನ್‌ಎ ಮೇಲೆ ಆಕ್ರಮಣ ಮಾಡುವ ಫ್ರೀ ರಾಡಿಕಲ್ಸ್ ಗಳನ್ನ ಸೃಷ್ಟಿಸುತ್ತವೆ, ಇದು ಚರ್ಮ ತೆಳುವಾಗುವುದು, ಒಣಗುವಿಕೆ ಮತ್ತು ಚರ್ಮದ ಕ್ಯಾನ್ಸರ್ ಗೂ ಕಾರಣವಾಗಬಹುದು. ಸಿಗರೇಟ್ ಹೊಗೆಯಂತಹ ಇತರ ಮಾಲಿನ್ಯಕಾರಕಗಳು ಚರ್ಮದ ಅಡಿಯಲ್ಲಿ ರಕ್ತದ ಹರಿವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಚರ್ಮದ ಸುಕ್ಕು ಏರ್ಪಡುತ್ತದೆ.

ಮಾಲಿನ್ಯವು ಕೇವಲ ನಿಮ್ಮ ಚರ್ಮವನ್ನು ಮಾತ್ರ ಆವರಿಸಿಕೊಳ್ಳುವುದಿಲ್ಲ. ಚರ್ಮದ ರಂಧ್ರಗಳಿಗಿಂತಲೂ ಚಿಕ್ಕದಾಗಿರುವ ಮಾಲಿನ್ಯದ ಕಣಗಳು ನಿಮ್ಮ ಚರ್ಮದ ಒಳಗೆ ಪ್ರವೇಶಿಸುತ್ತವೆ. ಹೀಗಾಗಿ, ಮಾಲಿನ್ಯದಿಂದ ಚರ್ಮದ ಹಾನಿ ತಪ್ಪಿಸಲು, ಚರ್ಮದ ಆರೈಕೆ ಮತ್ತು ವಿಶೇಷ  ಗಮನ ನೀಡಬೇಕು.

ಶುಚಿತ್ವ:

ರಕ್ಷಣಾತ್ಮಕ ಸೋಪಿನಿಂದ ಸ್ನಾನ ಮಾಡಿ ಚರ್ಮವನ್ನು ಶುದ್ಧೀಕರಿಸುವುದರಿಂದ ದಿನವಿಡೀ ರಂಧ್ರಗಳಲ್ಲಿ ಸಂಗ್ರಹವಾದ ಫ್ರೀ ರಾಡಿಕಲ್ಸ್ ಮತ್ತು ಧೂಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ನೀಮ್, ಅಲೋ ವೆರಾ ಮತ್ತು ತುಳಸಿಯಂತಹ ಪದಾರ್ಥಗಳು ಚರ್ಮವನ್ನು ರಕ್ಷಿಸುವ ಜೊತೆಗೆ ಚರ್ಮದ ತೇವಾಂಶ ಕಾಪಾಡುತ್ತದೆ. ಹೀಗಾಗಿ, ರಕ್ಷಣಾತ್ಮಕ ಉತ್ಪನ್ನಗಳಿಂದ ಪ್ರತಿ ದಿನವೂ ನಮ್ಮ ದೇಹವನ್ನ ತೊಳೆದು ಮಾಲಿನ್ಯವನ್ನು ಹೊರಹಾಕುವುದು ಬಹಳ ಮುಖ್ಯ.

ಮಾಯಿಶ್ಚರೈಸ್:

ಚರ್ಮವನ್ನ ಶುದ್ಧೀಕರಿಸಿದ ನಂತರ, ಅದರ ಮೇಲೆ ತಡೆಗೋಡೆ ಇರಿಸಲು ಮಾಶ್ಚರೈಸರ್ ಕೂಡ ಅತ್ಯಗತ್ಯವಾಗಿರುತ್ತದೆ. ನಿಮ್ಮ ಚರ್ಮದ ಗುಣ ಉಳಿಸಿಕೊಳ್ಳಲು, ನಿಮ್ಮ ಚರ್ಮದ ರಕ್ಷಣಾತ್ಮಕ ಕಾರ್ಯವನ್ನು ಬಲಪಡಿಸಲು ತೇವಾಂಶ ಹೆಚ್ಚಿಸುವ ಉತ್ಪನ್ನಗಳನ್ನು ಬಳಸಿ. ಒಳ್ಳೆಯ ಮಾಶ್ಚರೈಸರ್ ಚರ್ಮದಲ್ಲಿ ತೇವಾಂಶ ಹೆಚ್ಚಿಸುವ ಮೂಲಕ ಚರ್ಮದ ಚಾಲನೆ ಹೆಚ್ಚಿಸುವ ಜೊತೆಗೆ ಕೊಲಾಜನ್ ಪ್ರೋಟೀನ್ ಉತ್ಪಾದನೆಯನ್ನು ವೃದ್ಧಿಸುತ್ತದೆ. ಮಾಲಿನ್ಯದಿಂದ ಉಂಟಾಗುವ ಅಕಾಲಿಕ ವಯಸ್ಸಾಗುವಿಕೆ ವಿರುದ್ಧ ಹೋರಾಡಲು ಸಹ ವಿಟಮಿನ್ ಎ ಹೊಂದಿರುವ ಆರ್ದ್ರಕಾರಿಗಳೂ(moisturisers) ಸಹಾಯ ಮಾಡುತ್ತವೆ. ವಿಟಮಿನ್ ಸಿ ಒಳಗೊಂಡಿರುವ ಸಿರಮ್ಸ್(Serums)ಗಳು ಮಾಲಿನ್ಯದ ಪರಿಣಾಮದ ವಿರುದ್ಧ ಹೋರಾಡಲು ನೆರವಾಗುತ್ತವೆ.

ಆಂಟಿಆಕ್ಸಿಡೆಂಟ್ ಗಳನ್ನ ಬಳಸಿ:

ಆಂಟಿ ಆಕ್ಸಿಡೆಂಟ್ ಗಳನ್ನ ಚರ್ಮದ ಮೇಲೆ ಲೇಪಿಸುವುದು ಅಥವಾ ಸೇವಿಸುವ ಆಹಾರದಲ್ಲಿ ಸೇರಿಸುವುದರಿಂದ ಚರ್ಮದ ಆರೋಗ್ಯದ ದ್ರಷ್ಟಿಯಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಆಂಟಿ ಆಕ್ಸಿಡೆಂಟ್ ಗಳು ಫ್ರೀ ರಾಡಿಕಲ್ಸ್ ಚಟುವಟಿಕೆಯನ್ನ ತಡೆಯುತ್ತವೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಚರ್ಮಕ್ಕೆ ಬಳಸಬಹುದಾದ ಉತ್ತಮ ಆಂಟಿಆಕ್ಸಿಡೆಂಟ್ಗಳಾಗಿವೆ. ರಾತ್ರಿ ಮತ್ತು ಬೆಳಗಿನ ಎರಡು ಸಮಯ ಈ ವಿಟಮಿನ್ ಹೊಂದಿರುವ ಸೀರಮ್ಗಳನ್ನು ಬಳಸಿ. ಚರ್ಮದ ಆರೈಕೆಗೆ ಸಂಬಂಧಿಸಿದಂತೆ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಿತ್ತಳೆ, ಪಾಲಕ್ ಮತ್ತು ಬಾದಾಮಿ ಹೆಚ್ಚು ಪರಿಣಾಮಕಾರಿ. ನಿಮ್ಮ ಆಹಾರದಲ್ಲಿ ಸಾಕಷ್ಟು ವಿಟಮಿನ್ ಸಿ ಸಿಗುವುದಿಲ್ಲವೆಂದಾದರೆ, ದಿನನಿತ್ಯ ಮಲ್ಟಿವಿಟಮಿನ್ ತೆಗೆದುಕೊಳ್ಳಿ.

ಚರ್ಮ ರಕ್ಷಣೆ:

ಸೂರ್ಯನ ಕಿರಣಗಳಿಂದ ಚರ್ಮದ ರಕ್ಷಣೆಗೆ ಪ್ರತಿ ನಿತ್ಯಸನ್  ಸ್ಸ್ಕ್ರೀನ್ ಕ್ರೀಮ್ ಬಳಕೆ ಮಾಡುವುದು ಅತ್ಯಂತ ಪ್ರಮುಖವಾದುದಾಗಿದೆ. ಸೂರ್ಯನ ಬಿಸಿಲಿನಲ್ಲಿ ಹೊರಗಡೆ ಓಡಾಡುವ ರಕ್ಷಣೆಗೆ ಆದಷ್ಟು ಶಿರೋವಸ್ತ್ರಗಳು ಮತ್ತು ಟೋಪಿಗಳನ್ನ ಬಳಸಿ.

ಚಿಕಿತ್ಸೆ ನೀಡಿ:

ವಾರಕ್ಕೊಮ್ಮೆ ಫೇಸ್ ಮಾಸ್ಕ್ ಮಾಡುವುದರಿಂದ ವಾಯು ಮಾಲಿನ್ಯದಿಂದ ಉಂಟಾಗುವ ಹಾನಿಕಾರಕ ಪರಿಣಾಮ ಕಡಿಮೆ ಮಾಡಬಹುದು. ಪಪ್ಪಾಯ, ನೀಮ್, ಅಲೋ ವೆರಾ, ಜೇನು ತುಪ್ಪ ಒಳಗೊಂಡಿರುವ ಹೋಮ್ ಮೆಡ್ ಫೇಸ್ ಮಾಸ್ಕ್ ಗಳು ನಿರ್ದಿಷ್ಟ ಸಮಯದವರೆಗೆ ಮಾತ್ರ ಚರ್ಮದಲ್ಲಿ ತೇವಾಂಶ ಕಾಪಾಡಬಲ್ಲವಾಗಿವೆ.

ಧೂಮಪಾನ ಬಿಡಿ:

ಸಿಗರೇಟ್ ಸೇದುವುದು ಚರ್ಮಕ್ಕೆ ಹಾನಿ ಮಾಡುವ ಮತ್ತು ಸುಕ್ಕಿಗೆ ಕಾರಣವಾದ ಫ್ರೀ ರಾಡಿಕಲ್ಸ್ ಗಳ ಮೂಲಸ್ಥಾನವಾಗಿದೆ. ಹೀಗಾಗಿ, ಈ ಅಭ್ಯಾಸವನ್ನ ಕೂಡಲೇ ತೊರೆಯುವುದು ಪ್ರಮುಖವಾಗಿದೆ.

ಚರ್ಮದ ತೇವಾಂಶ ಕಾಪಾಡಿಕೊಳ್ಳಿ:

ಮಾಲಿನ್ಯದಿಂದ ಚರ್ಮದ ಮೇಲಾಗುವ ಹಾನಿಕಾರಕ ಪರಿಣಾಮ ತಡೆಗೆ ತೇವಾಂಶ ಕಾಪಾಡಿಕೊಳ್ಳುವುದು ಅತ್ಯುತ್ತಮ ಮಾರ್ಗವಾಗಿದೆ. ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ಗ್ರೀನ್ ಟೀ ಸೇವನೆಯಿಂದ ರಕ್ತ ಪರಿಚಲನೆ ವೃದ್ಧಿಸುವ ಜೊತೆಗೆ ಚರ್ಮದ ಚಲನಶೀಲತೆ ಕಾಪಾಡಿಕೊಳ್ಳಬಹುದಾಗಿದೆ.

ಈ ಸಲಹೆಗಳನ್ನು ಅನುಸರಿಸುವುದರಿಂದ ನಿಮ್ಮ ಚರ್ಮದ ಮೇಲೆ ಮಾಲಿನ್ಯದ ಹಾನಿಕಾರಕ ಪರಿಣಾಮಗಳನ್ನು ಎದುರಿಸಲು ನಿಮಗೆ ಸಾಧ್ಯವಾಗುತ್ತದೆ.

Leave a Comment