ವಾಯು ಮಾಲಿನ್ಯದಿಂದ ಆಯಸ್ಸು ಕ್ಷೀಣ

ಹ್ಯೂಸ್ಟನ್, ಆ. ೨೩: ವಾಯು ಮಾಲಿನ್ಯದಿಂದಾಗಿ ಭಾರತೀಯರ ಆಯಸ್ಸಿನಲ್ಲಿ ಸುಮಾರು ಒಂದೂವರೆ ವರ್ಷ ಪ್ರಮಾಣದಷ್ಟು ಕ್ಷೀಣಿಸಿದೆ ಎಂದು ವೈಜ್ಞಾನಿಕ ಸಂಶೊಧಕರು ಎಚ್ಚರಿಸಿದ್ದಾರೆ. ಗುಣಮಟ್ಟದ ವಾಯು ಸೇವನೆಯಿಂದ ಮಾತ್ರ ಜಗತ್ತಿನಾದ್ಯಂತ ಜನರ ಆಯಸ್ಸು ಗಟ್ಟಿಯಾಗಲಿದೆ ಎಂದೂ ಈ ತಜ್ಞರು ಸಲಹೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಗದಿ ಮಾಡಿರುವಂತೆ ಒಂದು ಕ್ಯೂಬಿಕ್ ಚದರ ಮೀಟರ್‌ಗೆ ೧೦ ಮೈಕ್ರೋಗ್ರಾಂಗಳಷ್ಟು ವಾಯು ಗುಣಮಟ್ಟ ಕಾಪಾಡಿಕೊಂಡರೆ ಮಾತ್ರ ಜಾಗತಿಕ ಜನಾಯುಷ್ಯ ಪ್ರಮಾಣ ಸರಾಸರಿ ೬ ತಿಂಗಳಷ್ಟು ಏರಲಿದೆ ಎಂದು ತಜ್ಞರು ಹೇಳಿದ್ದಾರೆ. ಈ ಗುರಿ ಸಾಧಿಸಿದಲ್ಲಿ ವಾಯು ಮಾಲಿನ್ಯ ಅಧಿಕವಾಗಿರುವ ಭಾರತ, ಪಾಕಿಸ್ತಾನ, ಬಾಂಗ್ಲಾ ದೇಶ ಮತ್ತು ಚೀನಾದಂತಹ ದೇಶಗಳಲ್ಲಿ ಜನರ ಆಯು ಪ್ರಮಾಣ ಅಂದಾಜು ೮ ತಿಂಗಳಿನಿಂದ ಒಂದೂಕಾಲು ವರ್ಷ ಹೆಚ್ಚಾಗಲಿದೆ ಎಂದು ಸಂಶೊಧನೆ ಹೇಳಿದೆ.

Leave a Comment