`ವಾನ್ನಕ್ರೈ` ಮೀರಿದ ಅಡೈಲ್‌ಕುಜ್ ವೈರಸ್ ದಾಳಿ

ಸ್ಯಾನ್‌ಫ್ರಾನ್ಸಿಸ್ಕೋ, ಮೇ ೧೭- ಮೈಕ್ರೋ ಸಾಫ್ಟ್ ವಿಂಡೋಸ್‌ನಲ್ಲಿರುವ ದೋಷವನ್ನು ಬಳಸಿಕೊಂಡು ವಾನ್ನಕ್ರಿಪ್ಟ್ ಎಂಬ ಒತ್ತೆ ಹಣ ಕೀಳುವ ವೈರಸ್ ವಿರುದ್ಧ ಇಡೀ ಜಗತ್ತೇ ಒಂದಾಗಿ ಹೋರಾಡುತ್ತಿರುವಾಗಲೇ ಮತ್ತೊಂದು ಅಡೈಲ್‌ಕುಜ್ ವೈರಸ್ ಕಂಪ್ಯೂಟರ್‌ಗಳಿಗೆ ಸಾಂಕ್ರಾಮಿಕ ದಾಳಿಯಿಟ್ಟು ಅತ್ಯಂತ ವೇಗವಾಗಿ ಡಿಜಿಟಲ್ ಹಣ ಗಳಿಸುತ್ತಿದೆ.

ಈ ಅಡೈಲ್‌ಕುಜ್ ವೈರಸ್ ದಾಳಿಯಿಂದ ಜಾಗತಿಕವಾಗಿ ಸಹಸ್ರಾರು ಕಂಪ್ಯೂಟರ್‌ಗಳು ನಿಷ್ಕ್ರಿಯವಾಗಿದ್ದು ಮನೋರೋ ಕ್ರಿಪ್ಟೊ ಕರೆನ್ಸಿಯ ಮೂಲಕ ತುರ್ತಾಗಿ ಡಿಜಿಟಲ್ ನಗದು ಗಳಿಸಲು ಆರಂಭಿಸಿದೆ.

2014ರ ಏಪ್ರಿಲ್‌ನಲ್ಲಿ ಸೃಷ್ಟಿಯಾದ ಈ ಮನೋರೋ ಉತ್ತರ ಕೊರಿಯಾದ ಹ್ಯಾಕರುಗಳಿಂದ ಸೃಷ್ಟಿಯಾಗಿದ್ದು ಪ್ರೈವೆಸಿ, ವಿಕೇಂದ್ರೀಕರಣ ಮೊದಲಾದ ವಿಚಾರಗಳನ್ನು ಇದು ಗಮನದಲ್ಲಿಟ್ಟುಕೊಂಡು ತೀವ್ರ ದಾಳಿ ಮಾಡುತ್ತಿದೆ.

ಇದು ಬಿಟ್ ಕಾಯಿನ್‌ಗೆ ಪರ್ಯಾಯವಾಗಿದ್ದು, ಮಾದಕ ವಸ್ತುಕೊಳ್ಳಲು, ಕದ್ದ ಕ್ರೆಡಿಟ್ ಕಾರ್ಡ್ ಬಳಸಲು ಮತ್ತು ಕಳ್ಳಸಾಗಣೆ ವಸ್ತುಗಳನ್ನು ಮಾರಲು ಈ ಮೊದಲು ಬಳಕೆಯಾಗುತ್ತಿತ್ತು.

ಇದು `ವಾನ್ನಕ್ರೈ` ವೈರಸ್‌ಗಿಂತ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುವ ಶಕ್ತಿ ಹೊಂದಿದ್ದು ಇದರ ಸೋಂಕು ತಗಲಿದ ಕಂಪ್ಯೂಟರ್ ನೆಟ್‌ವರ್ಕ್‌ನ್ನೇ ನಿಲ್ಲಿಸಿಬಿಡುತ್ತದೆ. ಇದರ ಸೋಂಕು ತಗುಲಿದರೆ ಮತ್ತೊಂದು ವೈರಲ್ ಸೋಂಕು ತಗುಲಲು ಅದು ಬಿಡುವುದೇ ಇಲ್ಲದಂತೆ ತನ್ನ ಪ್ರಭಾವವನ್ನು ಮುಂದುವರೆಸುತ್ತದೆಂದು ಸಂಶೋಧಕರು ಹೇಳುತ್ತಾರೆ.

ಸೋಂಕು ತಗುಲಿದ ಕಂಪ್ಯೂಟರ್ `ಎಟರ್ನಲ್ ಬ್ಲೂ` ಎಂಬ ತಂತ್ರಜ್ಞಾನದ ಮೂಲಕ ಬಳಕೆದಾರನನ್ನು ಶೋಷಿಸುತ್ತದೆ. ಅದರಿಂದ ಕ್ರಿಪ್ಲೇ ಕರೆನ್ಸಿ ಅಡೈಲ್‌ಕುಜ್ ಸ್ಥಾಪನೆಯಾಗಿ ದಾಳಿಕೋರರಿಗೆ ಸೈಬರ್ ಹಣ ತಲುಪುವಂತೆ ಮಾಡುತ್ತದೆ.

ಕಳೆದ ಮೇ 2 ರಂದು ಈ `ಅಡೈಲ್‌ಕುಜ್` ವೈರಾಣು ದಾಳಿ ಮಾಡಲು ತೊಡಗಿದೆ. ಇದು ವನ್ನಾಕ್ರಿಫ್ಟ್‌ಗಿಂತ ಮೊದಲೇ ಹುಟ್ಟಿಕೊಂಡ ಒತ್ತೆ ಹಣ ಪೀಡನೆಯ ಜಾಲವಾಗಿದ್ದು ಭಾರತ ಸೇರಿದಂತೆ ಒಟ್ಟು 150 ದೇಶಗಳಿಗೆ ವ್ಯಾಪಿಸಿಕೊಂಡಿದೆ.

ವಾನ್ನಕ್ರೈ ವೈರಾಣುವಿಗಿಂತ ದುಬಾರಿಯಾಗಿರುವ ಈ ಅಡೈಲ್‌ಕುಜ್ ಹೆಚ್ಚು ಒತ್ತೆ ಹಣ ಸಂಪಾದಿಸುತ್ತಿರುವುದಾಗಿ ತಿಳಿದು ಬಂದಿದೆ. ಇದು ವಾನ್ನಕ್ರೈ ಱ್ಯಾನ್ ಸಂವೇರ್‌ನಂತೆ ಗ್ರಾಹಕರಿಂದ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಇದು ಅಕ್ರಮವಾಗಿ ಮಾಡಿರುವ ಮಾಲ್‌ವೇರಾಗಿದ್ದು ಇದರ ದಾಳಿಯಾಗಿರುವುದು.

ಗ್ರಾಹಕರಿಗೆ ಬೇಗ ಗೊತ್ತಾಗುವುದಿಲ್ಲ. ಸಿಸ್ಟಂ ನಿಧಾನವಾಗುತ್ತದೆ ಮತ್ತು ಬೇರೆ ಯಾವುದೇ ಶೇಱ್ಡ್ ವಿಂಡೋ ಸೌಲಭ್ಯ ಇರುವುದಿಲ್ಲವೆಂದು ಸಂಶೋಧಕರು ಹೇಳುತ್ತಾರೆ.
ಮನೋರೋ ವೈರಾಣು ಬೆಲೆ ಕಳೆದ ತಿಂಗಳು 23 ಡಾಲರ್‌ಗೆ ಏರಿದ್ದು ಬಿಟ್ ಕಾಯಿನ್ ಸೇರಿದಂತೆ ಇತರ ಡಿಜಿಟಲ್ ಕರೆನ್ಸಿಗೆ ಅಂತಹ ಬೆಲೆಯಿಲ್ಲ. ಈ ಕಳ್ಳ ತಂತ್ರಜ್ಞಾನದಲ್ಲಿ ಅಪರಾಧಿಗಳು ಪತ್ತೆಯಾಗುವುದು ಸಾಧ್ಯವಿಲ್ಲದಂತಾಗಿದ್ದು ಅಕ್ರಮ ಮಾರುಕಟ್ಟೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Leave a Comment