ವಾಣಿಜ್ಯ ವಹಿವಾಟು ಯುಎಸ್- ಚೀನಾ ಚರ್ಚೆ

ಬೀಜಿಂಗ್, ಫೆ. ೧೧- ವಿಶ್ವದ ಎರಡು ಆರ್ಥಿಕ ಬಲಾಢ್ಯ ದೇಶಗಳಾದ ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ವಹಿವಾಟು ಕುರಿತ ಬಿಕ್ಕಟ್ಟು ಶಮನಕ್ಕೆ ಇಂದು ಎರಡೂ ದೇಶಗಳ ಸಂಧಾನಕಾರರ ನಿಯೋಗ ಚರ್ಚೆ ನಡೆಸಿದೆ.

ಎರಡೂ ದೇಶಗಳ ನಡುವಿನ ವಾಣಿಜ್ಯ ವ್ಯವಹಾರ ಬಿಕ್ಕಟ್ಟು ನಿವಾರಣೆಗೆ ನಿಗದಿಪಡಿಸಿರುವ ದಿನಾಂಕ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಬಿಕ್ಕಟ್ಟು ಕುರಿತಂತೆ ಪ್ರಾಥಮಿಕ ಹಂತದ ಚರ್ಚೆ ನಡೆಸಲಾಗಿದೆ. ಈ ಚರ್ಚೆಯ ಫಲಿತಾಂಶದ ಆಧಾರದಲ್ಲಿ ನಾಳೆ ಮುಂದಿನ ಹಂತದ ಚರ್ಚೆ ನಡೆಯಲಿದ್ದು, ಅದರಲ್ಲಿ ಅಧ್ಯಕ್ಷ ಟ್ರಂಪ್ ಆಡಳಿತದ ಉನ್ನತ ನಾಯಕರ ನಿಯೋಗ ಪಾಲ್ಗೊಳ್ಳುತ್ತಿದೆ. ಆ ಚರ್ಚೆಯಲ್ಲಿ ಅಮೆರಿಕದ ವಾಣಿಜ್ಯ ಪ್ರತಿನಿಧಿ ರಾಬರ್ಟ್ ಲಿಂಗ್ ತಿಜರ್ ಮತ್ತು ಖಜಾನೆ ಕಾರ್ಯದರ್ಶಿ ಸ್ಟೀವನ್ ಮುಚಿನ್ ನೇತೃತ್ವದ ಅಮೆರಿಕಾದ ನಿಯೋಗ ಭಾಗವಹಿಸುತ್ತಿದೆ. ಇಂದಿನ ಚರ್ಚೆಯಲ್ಲಿ ಉಪವಾಣಿಜ್ಯ ಪ್ರತಿನಿಧಿ ಜೆಫ್ರೆ ಗೆಱ್ರಿಶ್ ನೇತೃತ್ವದ ಅಮೆರಿಕ ತಂಡದ ಅಧಿಕಾರಿಗಳು, ಚೀನಾ ನಿಯೋಗದೊಂದಿಗೆ ಚರ್ಚೆ ನಡೆಸಿದ್ದಾರೆ.

‘ಅಮೆರಿಕ – ಚೀನಾ ನಡುವಿನ ವಾಣಿಜ್ಯ ವ್ಯವಹಾರದಲ್ಲಿ ಚೀನಾ ಪಾರದರ್ಶಕವಾಗಿಲ್ಲ’ ಎಂಬುದು ಅಧ್ಯಕ್ಷ ಟ್ರಂಪ್ ಅವರ ಚೀನಾ ಕುರಿತಂತೆ ಪ್ರಮುಖ ಆರೋಪ. ಚೀನಾದ ಈ ನೀತಿಯಿಂದ ಅಮೆರಿಕ, ಚೀನಾದೊಂದಿಗಿನ ವಾಣಿಜ್ಯ ವಹಿವಾಟಿನಲ್ಲಿ ನಷ್ಟ ಅನುಭವಿಸುತ್ತಿದೆ. ಇದನ್ನು ಮುಂದುವರೆಸಲಾಗದು ಎಂದು ಕಟ್ಟುನಿಟ್ಟಾಗಿ ಹೇಳಿದ್ದ ಟ್ರಂಪ್, ಚೀನಾದ 200 ಶತಕೋಟಿ ಡಾಲಱ್ಸ್ ಮೊತ್ತದ ಆಮದು ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದಕ್ಕೆ ತಾತ್ಕಾಲಿಕವಾಗಿ ತಡೆನೀಡಿದ್ದರು. ಬಿಕ್ಕಟ್ಟು ಪರಿಹಾರ ಚರ್ಚೆಗೆ ಅನುವಾಗಲು ಈ ತಡೆ ನೀಡಲಾಗಿತ್ತು.

Leave a Comment