ವಾಣಿಜ್ಯ ಮಳಿಗೆಗಳಿಗೆ ಶಾಸಕರಿಂದ ಗುದ್ದಲಿ ಪೂಜೆ

ಮೇಲುಕೋಟೆ.ನ.8. ಸ್ಥಳೀಯ ಗ್ರಾಮ ಪಂಚಾಯಿತಿ ನಿರ್ಮಿಸುತ್ತಿರುವ ವಾಣಿಜ್ಯಮಳಿಗೆಗಳ ನಿರ್ಮಾಣಕ್ಕೆ ಮಾಜಿ ಸಚಿವರೂ ಆದ ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜು ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಶಾಸಕರು ಕ್ಷೇತ್ರದ ಅಭಿವೃದ್ಧಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು
ಗ್ರಾಮ ಪಂಚಾಯಿತಿ ಹೇಮಾವತಿ ವಸತಿಗೃಹಗಳ ಮುಂಭಾಗ ನಾಗರೀಕರು ಇಟ್ಟುಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ಜಿಲ್ಲಾಧಿಕಾರಿಗಳು ಸೂಚನೆಯಂತೆ ವೈರಮುಡಿ ಜಾತ್ರಾಮಹೋತ್ಸವದ ನಂತರ ತೆರವುಗೊಳಿಸಿತ್ತು  ಇದೀಗ ಅದೇ ಸ್ಥಳದಲ್ಲಿ ಅಚ್ಚುಕಟ್ಟಾಗಿ 14 ವಾಣಿಜ್ಯಮಳಿಗೆಗಳನ್ನು ಗ್ರಾ.ಪಂ ಅನುದಾನದಲ್ಲೇ ಮೊದಲ ಹಂತದಲ್ಲಿ ನಿರ್ಮಿಸುತ್ತಿದೆ. ಪ್ರಥಮ ಹಂತದ ಮಳಿಗೆಗಳ ನಿರ್ಮಾಣಕ್ಕೆ 20 ಲಕ್ಷರೂ ಮೀಸಲಿರಿಸಲಾಗಿದೆ ಎಂದು ಗ್ರಾ.ಪಂ ಅಧ್ಯಕ್ಷ ಅವ್ವಗಂಗಾಧರ್ ಮಾಹಿತಿ ನೀಡಿದ್ದಾರೆ.
ಭೂಮಿಪೂಜೆಯಲ್ಲಿ ತಾ.ಪಂ ಅಧ್ಯಕ್ಷೆ ಸುಮಲತಾಮಹೇಶ್ ಮನ್ ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು,.ಜಿ.ಪಂ ಸದಸ್ಯ ತ್ಯಾಗರಾಜು, ಉಪವಿಭಾಗಾಧಿಕಾರಿ ಶೈಲಜಾ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಗ್ರಾ.ಪಂ ಅಧ್ಯಕ್ಷ ಅವ್ವಗಂಗಾಧರ್ ಉಪಾಧ್ಯಕ್ಷೆ ಮಮತಾ, ಪಿ.ಡಿ.ಒ ತಮ್ಮಣ್ಣಗೌಡ, ಮತ್ತಿತರರು ಭಾಗವಹಿಸಿದ್ದರು

Leave a Comment