ವಾಣಿಜ್ಯ ಬ್ಯಾಂಕ್ ಸಾಲಮನ್ನಾ ಖಾತೆ ವಿವರ

ಜಿಲ್ಲೆಯ 5026 ರೈತರು : 22 ಕೋಟಿ ಸಾಲಮನ್ನಾ
ರಾಯಚೂರು.ಜ.12- ಕೃಷಿ ಉದ್ದೇಶಕ್ಕೆ ವಾಣಿಜ್ಯ ಬ್ಯಾಂಕ್‌ಗಳಿಂದ ರೈತರು ಪಡೆದ ಸಾಲಕ್ಕೆ ಸಂಬಂಧಿಸಿ ಜಿಲ್ಲೆಯಿಂದ 5026 ಖಾತೆಗಳ ಸಂಪೂರ್ಣ ವಿವರವನ್ನು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು, ಒಟ್ಟು 22.30 ಕೋಟಿ ಸಾಲ ಮನ್ನಾ ಪ್ರಕ್ರಿಯೆಗೆ ಹಾದಿ ಸುಗಮಗೊಳಿಸಿದೆ.
ರಾಜ್ಯದ 30 ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾಲ ಮನ್ನಾ ಖಾತೆದಾರರ ವಿವರ ರಾಜ್ಯಕ್ಕೆ ಕಳುಹಿಸಿದ ಕೀರ್ತಿ ಜಿಲ್ಲಾಡಳಿತದ್ದಾಗಿದೆ. ವಾಣಿಜ್ಯ ಬ್ಯಾಂಕ್‌ಗಳ ಸಾಲ ಮನ್ನಾಕ್ಕೆ ಸಂಬಂಧಿಸಿ ರೈತರ ಎಲ್ಲಾ ವಿವರಗಳೊಂದಿಗೆ ಮಾಹಿತಿ ಕಳುಹಿಸಲು ಸರ್ಕಾರ ಸೂಚಿಸಿತ್ತು. ಸರ್ಕಾರದ ಈ ಆದೇಶದನ್ವಯ ಅಹೋರಾತ್ರಿ ವಾಣಿಜ್ಯ ಬ್ಯಾಂಕ್‌ಗಳ ಖಾತೆ ಪರಿಶೀಲಿಸಿ, ಸಾಲ ಮನ್ನಾ ಅರ್ಹತೆ ಮಾನದಂಡಗಳನ್ವಯ ಖಾತೆ ವಿಂಗಡಿಸಿ, ಸರ್ಕಾರಕ್ಕೆ ಕಳುಹಿಸಲಾಗಿದೆ.
ಆನ್ ಲೈನ್ ಮೂಲಕವೇ ಎಲ್ಲಾ ಖಾತೆ ಪರಿಶೀಲಿಸಲಾಗಿದೆ. ರೈತರಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಲೋಪವಾಗದಂತೆ ಸಮಗ್ರ ವಿವರಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸುವ ಮೂಲಕ ರಾಜ್ಯದಲ್ಲಿಯೇ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. 5026 ರೈತರಿಗೆ ಸಂಬಂಧಿಸಿ ಒಟ್ಟು 22.30 ಕೋಟಿ ರೂ. ಸಾಲ ಮನ್ನಾಕ್ಕೆ ಎಲ್ಲಾ ದಾಖಲೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಸಾಲ ಮನ್ನಾ ಭರವಸೆಯನ್ವಯ ಆರ್‌ಟಿಜಿಎಸ್ ಮೂಲಕ ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಭೀಕರ ಬರಗಾಲ ಹಿನ್ನೆಲೆ, ಜಿಲ್ಲಾಡಳಿತ ರೈತರ ಅನುಕೂಲಕ್ಕಾಗಿ ಯುದ್ಧೋಪಾದಿಯಲ್ಲಿ ಖಾತೆಗಳ ಸಮಗ್ರ ವಿಂಗಡನೆಗೊಳಿಸಿ, ಆನ್ ಲೈನ್ ಮೂಲಕ ಹಣ ಪಾವತಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ. ಉಳಿದ 29 ಜಿಲ್ಲೆಗಳ ಅಂಕೆಸಂಖ್ಯೆಗೆ ಹೋಲಿಸಿದರೆ, ಜಿಲ್ಲೆಯ ಖಾತೆ ಸಂಖ್ಯೆ ಬಹುತೇಕ ಎರಡು ಪಟ್ಟಿರುವುದು ವಿಶೇಷವಾಗಿದೆ. ಎರಡನೇ ಸ್ಥಾನದಲ್ಲಿ ಗುಲ್ಬರ್ಗಾ ಜಿಲ್ಲೆಯಿದ್ದರೇ, ಮೂರನೇ ಸ್ಥಾನದಲ್ಲಿ ಮೈಸೂರು ಜಿಲ್ಲೆಯಿದೆ.
ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕ್‌ಗಳೊಂದಿಗೆ ವಾಣಿಜ್ಯೋದ್ಯಾಮ ಬ್ಯಾಂಕ್ ಸಾಲ ಮನ್ನಾಕ್ಕೆ ಭರವಸೆ ನೀಡಲಾಗಿತ್ತು. ವಾಣಿಜ್ಯೋದ್ಯಮ ಬ್ಯಾಂಕ್‌ಗಳಲ್ಲಿ ರೈತರ ಸಾಲಕ್ಕೆ ಸಂಬಂಧಿಸಿದ ವಿವರಗಳಲ್ಲಿ ಕೆಲ ಗೊಂದಲಗಳಿರುವುದು ಸಾಲ ಮನ್ನಾ ವಿವರಣಕ್ಕೆ ಕಾರಣವಾಯಿತು. ಈ ಎಲ್ಲಾ ಗೊಂದಲಗಳನ್ನು ಆಯಾ ಜಿಲ್ಲಾಡಳಿತಗಳು ಪರಿಶೀಲಿಸಿ, ಆರ್‌ಟಿಜಿಎಸ್ ಮೂಲಕ ನೇರವಾಗಿ ರೈತರ ಖಾತೆಗೆ ಹಣ ಪಾವತಿಸಲು ಅನುಕೂಲವಾಗುವಂತೆ ಪಟ್ಟಿ ಕಳುಹಿಸಲು ಸೂಚಿಸಲಾಗಿತ್ತು.
ಜಿಲ್ಲಾಧಿಕಾರಿ ಬಿ.ಶರತ್ ಅವರು, ಸರ್ಕಾರದ ಈ ಆದೇಶವನ್ನು ಯುದ್ಧೋಪಾದಿಯಲ್ಲಿ ಅನುಷ್ಠಾನಗೊಳಿಸುವ ಮೂಲಕ ರೈತರ ಸಾಲ ಮನ್ನಾ ಯೋಜನೆ ಅತ್ಯಂತ ಯಶಸ್ವಿಗೆ ಒಟ್ಟು 5026 ಖಾತೆಗಳ ಸಮಗ್ರ ಮಾಹಿತಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದು ರಾಜ್ಯದಲ್ಲಿಯೇ ಒಂದು ದಾಖಲೆಯ ಸಂಖ್ಯೆಯಾಗಿದೆ.
ವಾಣಿಜ್ಯೋದ್ಯಮ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾಕ್ಕೆ ಸಂಬಂಧಿಸಿ ಸರ್ಕಾರ ಕೇಳಿದ ಮಾಹಿತಿ ಕಳುಹಿಸಲಾಗಿದೆ. ಬರಗಾಲ ಹಿನ್ನೆಲೆ, ರೈತರಿಗೆ ಸಾಲ ಮನ್ನಾದ ನೆರವು ದೊರೆಯಲೆಂಬ ಉದ್ದೇಶದಿಂದ ಅಹೋರಾತ್ರಿ ರೈತರ ಬ್ಯಾಂಕ್ ಖಾತೆ ಪರಿಶೀಲಿಸಿ ಆರ್‌ಟಿಜಿಎಸ್ ಮೂಲಕ ನೇರವಾಗಿ ಹಣ ಪಾವತಿಯಾಗಲು ಯಾವುದೇ ತೊಂದರೆಯಾಗದಂತೆ ಒಟ್ಟು 5026 ಖಾತೆ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಒಟ್ಟು 22.30 ಕೋಟಿ ಸಾಲ ಮನ್ನಾ ಹಣ ಈ ಖಾತೆಗಳ ಮೂಲಕ ಪಾವತಿಯಾಗಲಿದೆ.
ಬಿ.ಶರತ್
ಜಿಲ್ಲಾಧಿಕಾರಿ

Leave a Comment