ವಾಟ್ಸ್ ಅಪ್ ಸಂದೇಶ ರವಾನೆಗೆ ಬ್ರೇಕ್

ನವದೆಹಲಿ, ಏ7 -ಕೊರೊನಾ ಸೋಂಕು ಭೀತಿಯಿಂದ ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸಲು ವಾಟ್ಸ್‌ಪ್‌ನಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ.

ಕೊರೊನಾ ವಿಚಾರ ಸೇರಿದಂತೆ ಅನೇಕ ವಿಚಾರಗಳ ಆಗಾಗ್ಗೆ ಫಾರ್ವರ್ಡ್ ಮಾಡುವ ಸಂದೇಶಗಳಿಗೆ ವಾಟ್ಸಾಪ್ ಹೊಸ ಮಿತಿಯನ್ನು ಜಾರಿಗೊಳಿಸಲಾಗಿದೆ. ಈಗ ಒಂದು ಬಾರಿ ಕೇವಲ ಒಂದು ಚಾಟ್‌ಗೆ ಫಾರ್ವರ್ಡ್ ಮಾಡಬಹುದು.

ಈ ಹಿಂದೆ ಒಂದು ಸಂದೇಶವನ್ನು ೫ ಮಂದಿಗೆ ರವಾನೆ ಮಾಡಬಹುದಿತ್ತು. ಕೊರೊನಾ ಸೋಂಕು ಕುರಿತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಸಲುವಾಗಿ ವಾಟ್ಸಾಪ್‌ನಲ್ಲಿ ಈ ಹೊಸ ಬದಲಾವಣೆಯನ್ನು ತರುತ್ತಿದೆ. ಹೊಸ ನವೀಕರಣವನ್ನು ಪ್ರಕಟಿಸಿದ ಮೆಸೇಜಿಂಗ್ ಕಂಪನಿಯು ಹೊಸ ಬದಲಾವಣೆಯು ಇಂದು ಪ್ರಾರಂಭವಾಗಲಿದೆ ಎಂದು ಹೇಳಿದೆ.

ಈ ನೂತನ ಮಿತಿಯಲ್ಲಿ ಬಳಕೆದಾರರು ಸಂದೇಶ ರವಾನೆ ಮಾಡುವ ಮುನ್ನ ಒಂದು ಐಕಾನ್‌ನನ್ನು ಪ್ರದರ್ಶಿಸಲಿದೆ. ಇದು ಮಾಹಿತಿ ರವಾನೆಗೆ ಮುನ್ನು ಎಚ್ಚರಿಕೆ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ. ಇದ್ದರಿಂದ ಗ್ರಾಹಕ ಎರಡು ಬಾರಿ ತಾವು ಕಳುಹಿಸುವ ಸಂದೇಶವನ್ನು ನೋಡಿಕೊಳ್ಳಬಹದು.

 ದೇಶಾದ್ಯಂತ ಲಾಕ್ ಡೌನ್ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ, ಮೊಬೈಲ್ ಬಳಕೆ ಹೆಚ್ಚಾಗಿದೆ. ಅಲ್ಲದೇ ಫಾರ್ವರ್ಡ್ ಮೆಸೇಜ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಅದರಲ್ಲೂ ಸತ್ಯಕ್ಕೆ ದೂರವಾದಂತ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇದನ್ನು ವೆರಿಫಿಕೇಷನ್ ಮಾಡಿಕೊಳ್ಳುವಂತ ಹೊಸ ಫೀಚರ್ ಅನ್ನು ಇದೀಗ ವಾಟ್ಸ್ ಅಪ್ ಪರಿಚಯಿಸಿದೆ. ಅಲ್ಲದೇ ಒಂದಾದ ನಂತ್ರ ಮತ್ತೊಂದು ಸಂದೇಶವನ್ನು ಗುಂಪು ಗುಂಪಾಗಿ ಫಾರ್ವರ್ಡ್ ಮಾಡುವುದಕ್ಕೆ ಬ್ರೇಕ್ ಹಾಕಿದೆ. ಒಂದೇ ಸಮಯದಲ್ಲಿ ಒಂದೇ ಸಂದೇಶವನ್ನು ಒಬ್ಬರಿಗೆ ಫಾರ್ವರ್ಡ್ ಮಾಡುಲು ಸೀಮಿತಗೊಳಿಸಿದೆ.

ಈ ಕುರಿತಂತೆ ಕೇಂದ್ರ ಸರ್ಕಾರ ವಾಟ್ಸ್ ಅಪ್ ಗೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಈ ಕ್ರಮ ಕೈಗೊಂಡಿರುವ ವಾಟ್ಸ್ ಅಪ್ ಸಂಸ್ಥೆ, ಕೋವಿಡ್-19 ಕುರಿತಂತೆ ಇಂದು ಅನೇಕ ಇಲ್ಲ ಸಲ್ಲದ ಸುದ್ದಿಗಳು ಹರಿದಾಡುತ್ತಿವೆ. ಈ ಮೂಲಕ ಎಂದೋ, ಯಾವಾಗಲೋ ನಡೆದಂತ ಸುದ್ದಿಗಳು ವೈರಲ್ ಆಗುತ್ತಿವೆ. ಇದನ್ನು ನಿಯಂತ್ರಣಕ್ಕೆ ಫಾರ್ವರ್ಡ್ ಮಾಡಲಾಗುತ್ತಿರುವ ಸುದ್ದಿ ಎಷ್ಟು ಸತ್ಯ ಎಂಬ ಬಗ್ಗೆ ವೆರಿಫಿಕೇಷನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದು ಮೊಬೈಲ್ ಅಲ್ಲದೇ ವೆಬ್ ವರ್ಷನ್ ನಲ್ಲೂ ಕೂಡ ಲಭ್ಯವಿರಲಿದೆ. ಬಳಕೆದಾರರು ಚೆಕ್ ಮಾಡಿಕೊಂಡು ಫಾರ್ವರ್ಡ್ ಮೆಸೇಜ್ ಸತ್ಯಾಸತ್ಯತೆ ತಿಳಿದು, ಇತರರಿಗೆ ಫಾರ್ವರ್ಡ್ ಮಾಡಬಹುದಾಗಿ ಎಂದು ತಿಳಿಸಿದೆ.

ಇನ್ನೂ ಇದಷ್ಟೇ ಅಲ್ಲದೇ ಈ ಮೊದಲು ಐದು ಗುಂಪು ಇಲ್ಲವೇ ಜನರಿಗೆ ಒಂದು ಸಂದೇಶವನ್ನು ಫಾರ್ವರ್ಡ್ ಮಾಡಲು ಅವಕಾಶವನ್ನು ನಿಗಧಿ ಪಡಿಸಲಾಗಿತ್ತು. ಆದ್ರೇ ಇದೀಗ ಇದಕ್ಕೆ ಬ್ರೇಕ್ ಹಾಕಲಾಗಿದ್ದು, ಇನ್ಮುಂದೆ ಒಂದೇ ಒಂದು ಸಂದೇಶವನ್ನು ಒಬ್ಬ ವ್ಯಕ್ತಿ, ಇಲ್ಲವೇ ಗುಂಪಿಗೆ ಮಾತ್ರವೇ ಫಾರ್ವರ್ಡ್ ಮಾಡಬಹುದಾಗಿದೆ. ಈ ಮೂಲಕ ಗುಂಪು ಗುಂಪು ಸಂದೇಶ್ ಫಾರ್ವರ್ಡ್ ಗೆ ಬ್ರೇಕ್ ಹಾಕಲಾಗಿದೆ ಎಂಬುದಾಗಿ ಹೇಳಿದೆ.

ಹೀಗಾಗಿ ವಾಟ್ಸ್ ಅಪ್ ಬಳಕೆದಾರರು ಫಾರ್ವರ್ಡ್ ಮೆಸೇಜ್ ನ ಅಸಲಿ ಸತ್ಯವನ್ನು ಇನ್ಮುಂದೆ ತಾವೇ ವೆರಿಫಿಕೇಷನ್ ಮಾಡಿಕೊಂಡು ಕಳುಹಿಸಬಹುದಾಗಿದೆ. ಈ ಮೂಲಕ ಕೋವಿಡ್-19 ಸೇರಿದಂತೆ ಯಾವುದೇ ಸುದ್ದಿಗಳನ್ನು ಪದೇ ಪದೇ ಹಿಂದೆ ಮುಂದೆ ಫಾರ್ವರ್ಡ್ ಮಾಡುವ ಮೊದಲು ಸತ್ಯಾಸತ್ಯತೆ ತಿಳಿದು ಕೊಂಡು ಫಾರ್ವರ್ಡ್ ಮಾಡಬಹುದಾಗಿದೆ. ಜೊತೆಗೆ ಒಂದೇ ಸಮಯದಲ್ಲಿ ಒಂದೇ ಸಂದೇಶವನ್ನು ಫಾರ್ವರ್ಡ್ ಮಾಡಲು ಮಾತ್ರ ಸಾಧ್ಯವಾಗಲಿದೆ.

Leave a Comment