ವಾಜಪೇಯಿ ಮಾತು, ಮೌನ ಎರಡೂ ಪ್ರಬಲ – ಪ್ರಧಾನಿ

ನವದೆಹಲಿ, ಫೆ 12-ದೇಶದ ರಾಜಕಾರಣದಲ್ಲಿ  ಮಾಜಿ  ಪ್ರಧಾನಿ ಅಟಲ್ ಬಿಹಾರಿ  ವಾಜಪೇಯಿ   ಅಜರಾಮರ  ಸಾರ್ವಜನಿಕ ಜೀವನದಲ್ಲಿ ನಡೆದುಕೊಂಡ  ರೀತಿ ಇತರರಿಗೆ ಸದಾ ಮಾದರಿ ಎಂದು ರಾಷ್ಟ್ರಪತಿ ರಾಂನಾಥ್ ಕೋವಿಂದ್ ಗುಣಗಾನ ಮಾಡಿದರು.

ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ವಾಜಪೇಯಿ ಭಾವಚಿತ್ರ ಅನಾವರಣಗೊಳಿಸಿದ ನಂತರ ಅವರು ಈ ವಿಷಯ ತಿಳಿಸಿದರು.

.ಪ್ರಧಾನ ಮಂತ್ರಿ ನರೇಂದ್ರ ಮೋದಿ  ಮಾತನಾಡಿ, ವಾಜಪೇಯಿ ಮಹಾನ್ ಸಂವಹನಕಾರ ಎಂದು ಸ್ಮರಿಸಿಕೊಂಡರು. ಅವರ ಭಾಷಣಗಳಂತೆ ಅವರ ಮೌನವೂ  ಪ್ರಬಲವಾಗಿತ್ತು.  ಯಾವಾಗ ಮಾತನಾಡಬೇಕು  ಯಾವಾಗ ಮೌನವಾಗಬೇಕು ಎಂಬುದು ಅವರಲ್ಲಿ ಕರಗತವಾಗಿತ್ತು. ಅದು ಅವರ ವಿಶೇಷ, ಅಸಾಧಾರಣ ಗುಣ ವಾಗಿತ್ತು ಅವರು ಹೇಳಿದರು.

 

ವಾಜಪೇಯಿಯವರು ಪ್ರಜಾಪ್ರಭುತ್ವದಲ್ಲಿ ಯಾವುದೇ ಶತ್ರುಗಳಿಲ್ಲ  ಕೇವಲ ರಾಜಕೀಯ ಎದುರಾಳಿಗಳಿದ್ದಾರೆ ಎಂದು ತಿಳಿಸಿಕೊಟ್ಟಿದ್ದಾರೆ  ಎಂದರು

ಅವರು ತಮ್ಮ ರಾಜಕೀಯ ಜೀವನದಲ್ಲಿ ಬಹಳಷ್ಟು ಏರಿಳಿತಗಳನ್ನು ಕಂಡರೂ ಎಂದು ನಂಬಿದ ತತ್ವ ಸಿದ್ದಾಂತ ಗಳನ್ನು  ಬಲಿಕೊಡಲಿಲ್ಲ ,ರಾಜಿ ಮಾಡಿಕೊಳ್ಳಲಿಲ್ಲ. ನಾವು ಸಾಮಾನ್ಯ ಜನರು ಅವರಿಂದ ಬಹಳಷ್ಟು ಕಲಿತಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರು.

 

ಅವರ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮಾತನಾಡಿ, ಸಂಸತ್ತಿನ ರಾಜಕಿಯ  ಚರ್ಚೆಯ ಗುಣಮಟ್ಟ ಕುಸಿತವಾಗುತ್ತಿರುವುದರ ಬಗ್ಗೆ ತೀವ್ರ  ಕಳವಳ  ವ್ಯಕ್ತಪಡಿಸಿದ್ದಾರೆ.

 

ರಾಜಕೀಯ ಚರ್ಚೆಯ ಮಹತ್ವ  ಕಡಿಮೆಯಾಗುತ್ತಿದೆ. ರಾಜಕೀಯ ಪಕ್ಷಗಳು ಶತ್ರುಗಳಲ್ಲ, ಕೇವಲ ಪ್ರತಿಸ್ಪರ್ಧಿ ಎಂದು ಪರಿಗಣಿಸಬೇಕು ಮತ್ತು ಅಡ್ಡಿಪಡಿಸುವ ಬದಲು ನಿರ್ಧರಿಸಿ- ಚರ್ಚೆಗೆ ಅನವು ಮಾಡಿಕೊಟ್ಟರೆ ಅದು ಅಟಲ್ ಜೀಯವರಿಗೆ ಸಲ್ಲಿಸುವ ಅತಿದೊಡ್ಡ ಗೌರವವಾಗಲಿದೆ  ಎಂದು ಅವರು ಹೇಳಿದರು.

 

ವಾಜಪೇಯಿ ಅವರು ಮಹಾನ್ ಆಡಳಿತಗಾರ, ರಾಜಕಾರಣಿ, ಭಾಷಣಕಾರ, ಮುತ್ಸದ್ಧಿ ಸಂಸತ್ ಸದಸ್ಯ, ಪ್ರಧಾನ ಮಂತ್ರಿ ಮತ್ತು ಹೆಚ್ಚಿನವರು, ಒಬ್ಬ ಮಹಾನ್ ವ್ಯಕ್ತಿ ಎಂದು ವಿವರಿಸುತ್ತಾ, “ಅವರು ಸಾರ್ವಜನಿಕ ಜೀವನದಲ್ಲಿ ಎಲ್ಲರಿಗೂ ಒಂದು ಮಾದರಿ ರೂಪಕ ಎಂದು ನಾಯ್ಡು ಹೇಳಿದರು.

 

ಲೋಕಸಭಾ  ಸ್ಫೀಕರ್ ಸುಮಿತ್ರಾ  ಮಹಾಜನ್ ಮಾತನಾಡಿ,  ಕೇಂದ್ರ ಸಭಾಂಗಣದಲ್ಲಿ ವಾಜಪೇಯಿ ಅವರ ಭಾವಚಿತ್ರವನ್ನು ಹಾಕಲು ನಿರ್ಧರಿಸಿದ ಸಮಿತಿಗೆ ಧನ್ಯವಾದ  ಸಲ್ಲಿಸಿದರು.

ವಾಜಪೇಯಿ  ಗ್ವಾಲಿಯರ್ ನಲ್ಲಿ  ಡಿಸೆಂಬರ್ 25, 1924 ರಂದು ಜನಿಸಿದರು ಮತ್ತು ಆಗಸ್ಟ್ 16, 2018 ರಂದು ದೆಹಲಿಯಲ್ಲಿ ನಿಧನರಾದರು.

 

Leave a Comment