ವಾಜಪೇಯಿ ಉತ್ತಮ ಸಂಸದೀಯ ಪಟು

ಹರಪನಹಳ್ಳಿ.ಆ.18; ಸರಳವಾದ, ಸ್ವಚ್ಛವಾದ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವ ಹಾಗೇ ಮಾತನಾಡುತ್ತಿದ್ದ ರಾಜಕೀಯದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಎಂದು ಸಹಕಾರಿ ಬ್ಯಾಂಕ್‍ಗಳ ರಾಜ್ಯ ನಿರ್ದೇಶಕ ಜಿ.ನಂಜನಗೌಡ ಹೇಳಿದರು. ಪಟ್ಟಣದ ಸಹಕಾರಿ ಬ್ಯಾಂಕ್ ಅವರಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.ಉತ್ತಮ ಭಾಷಣಕಾರರಾಗಿದ್ದ ಅಟಲ್ ಜಿ ತಮ್ಮ ಪ್ರಖರ ಮಾತಿನಿಂದ ಜನರನ್ನು ಸೆಳೆಯುವಂತವರಾಗಿದ್ದರು. ಅವರ ಭಾಷಣ ಕೇಳಲು ಸಹಸ್ರಾರು ಜನ ಸೇರುತ್ತಿದ್ದರಲ್ಲದೇ ಅವರೊಬ್ಬ ಉತ್ತಮ ಸಂಸದೀಯ ಪಟು ಆಗಿದ್ದರು. ಒಂದು ಸಮಸ್ಯೆಯ ಕುರಿತು ಚೆನ್ನಾಗಿ ಆಲೋಚಿಸಿ ತರ್ಕಬದ್ದವಾಗಿ ವ್ಯಾಖ್ಯಾನ ಮಾಡುತ್ತಿದ್ದ ಇವರು ಸಂಸತ್ತಿನಲ್ಲಿ ಯಾವುದೇ ವಿಷಯ ಮಾತನಾಡುವಾಗ ಅಟಲ್ ಜಿ ತಮ್ಮ ವಾದವನ್ನು ನಿಚ್ಚಿತ ರೂಪದಲ್ಲಿ ಮಂಡಿಸುತ್ತಿದ್ದರು ಎಂದರು. ಬ್ಯಾಂಕ್ ಅಧ್ಯಕ್ಷ ಓಂಕಾರಗೌಡ, ವೈದ್ಯ ಡಾ.ಎಸ್.ಎನ್.ಮಹೇಶ್, ಎಚ್.ಎಂ.ಜಗದೀಶ್, ಗುಂಡಗತ್ತಿ ಕೋಟ್ರಪ್ಪ, ವಕೀಲ ಜಗದಪ್ಪ, ಬಿ.ಕೃಷ್ಣಮೂರ್ತಿ, ಬಂಕಾಪುರ ಸತೀಶ ಮತ್ತಿತರರಿದ್ದರು.

Leave a Comment