ವಸತಿ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ, ಮಾ. 14 – ನೆತ್ತಿಗೊಂದು ಸೂರು ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಸೇನೆ (ಕೆಆರ್ ಎಸ್ ) ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿ ತೆರಳಿ ಮನವಿ ಸಲ್ಲಿಸಿದರು.
ರಾಜ್ಯದ ವ್ಯಾಪಾರಿ ಕೇಂದ್ರವಾಗಿರುವ ದಾವಣಗೆರೆಯಲ್ಲಿ ಅತೀ ಹೆಚ್ಚು ಬಡವರು ಹಾಗೂ ಮಧ್ಯಮ ವರ್ಗದವರು ವಾಸವಾಗಿದ್ದಾರೆ. ಅನೇಕ ಕುಟುಂಬಗಳು ಅತ್ಯಂತ ಕಡಿಮೆ ಸ್ಥಳದಲ್ಲಿ ಪ್ರಾಣಿಗಳಂತೆ ವಾಸ ಮಾಡುತ್ತಿದ್ದಾರೆ. ಜೀವನ ಸಾಗಿಸಲು ಬೀದಿ ಅಂಗಡಿ ವ್ಯಾಪಾರ, ಮೆಕಾನಿಕ್, ಚಾಲಕರು, ಮನೆ ಕೆಲಸ ಇತ್ಯಾದಿ ಕಸುಬುಗಳನ್ನು ಮಾಡುತ್ತಿದ್ದಾರೆ. ನಗರವಾಸಿಗಳಿಗೆ ಸೇವೆ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ನಗರ ಸ್ವಚ್ಚ ಮಾಡುವುದು, ಶೌಚಾಲಯ ಶುದ್ದೀಕರಿಸುವುದು ಕಡಿಮೆ ಗಳಿಕೆಗೆ ಸೇವೆ ಮಾಡುವ ಎಲ್ಲಾ ಬಡವರಿಗೆ ವಸತಿ ಅವಶ್ಯಕತೆ ಇದೆ. ಅದಕ್ಕಾಗಿ ನೆತ್ತಿಗೊಂದು ಸೂರು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಲ್.ಚಂದ್ರಶೇಖರ್, ಮೆಹಬೂಬ್ ಅಲಿ ಸೇರಿದಂತೆ ಅನೇಕರು ಇದ್ದರು.

Leave a Comment