ವಸತಿ ಗೃಹದಿಂದ ಹೊರ ಹಾಕಲು ಆದೇಶ

ಮೈಸೂರು ಸೆ,7- ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸೇವೆಯಿಂದ ವಜಾಗೊಂಡಿದ್ದರೂ ವಸತಿಗೃಹವನ್ನು ತೆರವುಗೊಳಿಸದಿರುವ ಹಿನ್ನಲೆಯಲ್ಲಿ ಉನ್ನತ ಅಧಿಕಾರಿಗಳು ವಾಸವಿರುವರನ್ನು ವಸತಿ ಗೃಹದಿಂದ ಹೊರ ಹಾಕಲು ಆದೇಶಿಸಿದ್ದಾರೆ.
ಸಿ. ಎ. ಆರ್ ಪೊಲೀಸ್ ಆಗಿದ್ದ ಪ್ರಸನ್ನಕುಮಾರ್ ಎಂಬುವವರು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅವರನ್ನು 2017 ರಲ್ಲಿ ಸೇವೆಯಿಂದ ವಜಾ ಗೊಳಿಸಲಾಗಿತ್ತು. ಸರ್ಕಾರಿ ನಿಯಮಾವಳಿಗನುಸಾರವಾಗಿ ಸೇವೆಯಿಂದ ವಜಾ ಆದ ಕೂಡಲೇ ತಾವು ವಾಸಿಸುತ್ತಿದ್ದ ಮನೆಯನ್ನು ತೆರವು ಮಾಡಬೇಕು. ಆದರೆ ಪ್ರಸನ್ನ ಕುಮಾರ್ ಈ ನಿಯಮವನ್ನು ಗಾಳಿಗೆ ತೂರಿ ಮನೆಯನ್ನು ತೆರವುಗೊಳಿಸದೇ ಅಲ್ಲಿಯೇ ವಾಸಿಸುತ್ತಿದ್ದರು. ಪ್ರಸನ್ನಕುಮಾರ್ ತಾವು ವಾಸಿಸುತ್ತಿದ್ದ ಮನೆಯನ್ನು ಇನ್ನೂ ತೆರವುಗೊಳಿಸದಿರುವ ಮಾಹಿತಿ ಪಡೆದ ಉಪಪೊಲೀಸ್ ಆಯುಕ್ತರು ಇಂದು ವಿಜಯನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರವರಿಗೆ ಲಿಖಿತ ಆದೇಶ ನೀಡಿ ಈ ಕೂಡಲೇ ಪ್ರಸನ್ನ ಕುಮಾರವರನ್ನು ಮನೆಯಿಂದ ಹೊರಗೆ ಹಾಕುವಂತೆ ಸೂಚನೆ ನೀಡಿದ್ದಾರೆ.

Leave a Comment