ವಸತಿ ಆಶ್ರಯ ಶಾಲೆ : ಕಳಪೆ ಆಹಾರ ಪೂರೈಕೆ :25 ವಿದ್ಯಾರ್ಥಿಗಳು ಅಸ್ವಸ್ಥ – ಆಕ್ರೋಶ

ದೇವದುರ್ಗ.ಡಿ.05- ಕಳೆಪ ಗುಣಮಟ್ಟದ ಮಧ್ಯಾಹ್ನ ಊಟ ಸೇವಿಸಿದ 25 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಪಾಲಾದ ಘಟನೆ ನಿನ್ನೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವಸತಿ ಆಶ್ರಯ ಶಾಲೆಯಲ್ಲಿ ನಡೆದಿದೆ.

ಮಧ್ಯಾಹ್ನದ ಊಟದ ನಂತರ ಸುಮಾರು 25 ವಿದ್ಯಾರ್ಥಿಗಳಿಗೆ ತಲೆನೋವು, ವಾಂತಿ, ಭೇದಿ ಕಂಡು ಬಂದಿತ್ತು. ಇದ್ದರಿಂದ ಮಕ್ಕಳು ತೀವ್ರ ಅಸ್ವಸ್ಥಗೊಂಡ ರಾತ್ರಿ ಎಲ್ಲಾ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅರೆಬೆರೆ ಬೆಂದ ಮಧ್ಯಾಹ್ನದ ಊಟವೇ ಈ ಘಟನೆಗೆ ಕಾರಣ ಎನ್ನುವುದು ಮಕ್ಕಳ ಆರೋಪವಾಗಿದೆ. ಚಿಕಿತ್ಸೆ ನಂತರ ಎಲ್ಲಾ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.

ಈ ಘಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಫಕೀರಪ್ಪ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ವಾಂತಿ, ಭೇದಿ ಘಟನೆಯಿಂದ ವಸತಿ ನಿಲಯದಲ್ಲಿರುವ ಮಕ್ಕಳು ಭಯಭೀತಗೊಂಡಿದ್ದಾರೆ. ವಸತಿ ಆಶ್ರಮ ಶಾಲೆಯಲ್ಲಿ ಒಟ್ಟು 100 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಆರೇಳು ತಿಂಗಳಿಗೊಮ್ಮೆ ಬದಲಾಗುವ ವೀಕ್ಷಕರಿಗಾಗಿ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವಸತಿಗಳಲ್ಲಿ ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ ಎನ್ನುವುದು ನಿನ್ನೆಯ ಘಟನೆ ನಿದರ್ಶನವಾಗಿದೆ. ಪ್ರತಿ ವರ್ಷ ಕೋಟ್ಯಾಂತರ ರೂ. ಅನುದಾನ ವಸತಿ ಶಾಲೆಗೆ ನೀಡಲಾಗುತ್ತದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸಮರ್ಪಕ ನಿರ್ವಹಿಸದಿರುವುದರಿಂದ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆಂದು ಪಾಲಕರು ಮತ್ತು ವಿದ್ಯಾರ್ಥಿಗಳ ದೂರಾಗಿದೆ.

ಮೇಲ್ವಿಚಾರಕರ ನಿರ್ಲಕ್ಷ್ಯೆ ಮೇಲಾಧಿಕಾರಿಗಳ ಬೇಜವಾಬ್ದಾರಿ ತನದಿಂದ ಬಡ ವಿದ್ಯಾರ್ಥಿಗಳು ಅನೇಕ ಸೌಲಭ್ಯಗಳಿಂದ ವಂಚಿತಗೊಳ್ಳುವಂತಾಗಿದೆಂದು ಎಸ್ಎಫ್ಐ ಮುಖಂಡ ಲಿಂಗಣ್ಣ ಮಕಾಶಿ ಅವರು ದೂರಿದ್ದಾರೆ.

Leave a Comment