ವಲಸೆ ಕಾರ್ಮಿಕರಿಗೆ ಸುರಕ್ಷಿತ ಪ್ರಯಾಣ ಸೌಲಭ್ಯ ಒದಗಿಸಿ

ಬಳ್ಳಾರಿ, ಮೇ.29: ಕೋವಿಡ್-19 ಮಹಾಮಾರಿಯಿಂದ ತೊಂದರೆಗೆ ಒಳಪಟ್ಟು ವಲಸೆ ಕಾರ್ಮಿಕರು, ಬಡವರು ಹಾಗೂ ನೋವಿಗೆ ಸಿಲುಕಿರುವವರು ಎದುರಿಸುತ್ತಿರುವ ಕಷ್ಟ ಕಾರ್ಪಣಗ್ಯಳ ಬಗ್ಗೆ ಸರಕಾರದ ಗಮನ ಸೆಳೆಯಲು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರದರ್ಶನ ನಡೆಸಿತು.
ವಲಸೆ ಕಾರ್ಮಿಕರು, ಬಡವರು, ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾದ ಪ್ರಯಾಣವನ್ನು ಖಾತ್ರಿಪಡಿಸಬೇಕು. ಅವರ ಮಕ್ಕಳು ಮತ್ತು ಕುಟುಂಬದವರಿಗೆ ಯೋಗ್ಯವಾದ ಆಹಾರ, ವಸತಿ ವೈದಕೀಯ ಚಿಕಿತ್ಸೆಯನ್ನು ಖಾತ್ರಿಪಡಿಸಿ ಮತ್ತು ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು.

ಬಡ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಸೂಕ್ತವಾದ ಹಣ ಸಹಾಯವನ್ನು ನೀಡಿ, ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಿ, ಮದ್ಯ ಮಾರಾಟವನ್ನು ಶಾಶ್ವತವಾಗಿ ನಿಲ್ಲಿಸಿ

ಆಶಾ ಕಾರ್ಯಕರ್ತೆಯರು, ಐಸಿಡಿಎಸ್, ಬಿಸಿಯೂಟದವರಿಗೆ ಹಾಗು ಇನ್ನಿತರ ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯವನ್ನು ನೀಡಿ, ಕೆಲಸದ ವೇಳೆಯನ್ನು 8 ರಿಂದ 10 ಘಂಟೆಯವರೆಗೆ ವಿಸ್ತರಿಸಿರುವುದನ್ನು ನಿಲ್ಲಿಸಿ ಮೊದಲಾದ ಬೇಡಿಕೆಗಳ ಈಡೇರಿಕೆ ಆಗ್ರಹಿಸಲಾಯಿತು.
ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಶಾಂತಾ, ರಾಜ್ಯ ಉಪಾಧ್ಯಕ್ಷೆ ಎಂ.ಎನ್.ಮಂಜುಳಾ, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಅಹಲ್ಯ, ಪದ್ಮಾವತಿ, ಗಿರಿಜಾ, ವಿಧ್ಯಾ, ರೇಖಾ, ಭಾರ್ಗವಿ, ಮೊದಲಾದವರು ಪಾಲ್ಗೊಂಡಿದ್ದರು.

Share

Leave a Comment