ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಲಾರಿ ವಶ

ಧಾರವಾಡ ಮೇ ೨೬ – ವಲಸೆ ಕಾರ್ಮಿಕರನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದನ್ನು ನರೇಂದ್ರ ಚೆಕ್ ಪೋಸ್ಟ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗರಗ ಪೊಲೀಸರು ವಶಕ್ಕೆ ‌ಪಡೆದಿದ್ದಾರೆ.
ಕೆ.ಎ. ೨೨ ಡಿ ೩೬೪೮ ನಂಬರಿನ ಲಾರಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಶಿರೂರ ಗ್ರಾಮದ ಸುಮಾರು ೬೬ ಜನ ವಲಸೆ ಕಾರ್ಮಿಕರನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿ ತಡೆದ ಪೊಲೀಸರು    ಸೂಕ್ತ ತಪಾಸಣೆ ನಡೆಸಿದಾಗ ಕಾರ್ಮಿಕರನ್ನು ಮಹಾರಾಷ್ಟ್ರ ರಾಜ್ಯದ ರಾಯಗಢಕ್ಕೆ ಕರೆದುಕೊಂಡು ಹೋಗಿರುವುದಾಗಿ ಲಾರಿ ಚಾಲಕ ತಿಳಿಸಿದ್ದಾನೆ.
ಕಾರ್ಮಿಕರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಕಾರ್ಮಿಕರನ್ನು ನಗರದ ಪಟ್ಟಣಶೆಟ್ಟಿ ಕಲ್ಯಾಣ ಮಂಟಪದಲ್ಲಿ ಇರಿಸಲಾಗಿದ್ದು, ಚಾಲಕ ಹಾಗೂ ಲಾರಿಯ ಮೇಲೆ ಗರಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಮಿಕರನ್ನು ಜಿಲ್ಲಾ ಎಸ್.ಪಿ. ವರ್ತಿಕಾ ಕಟಿಯಾರ್ ಅವರು ಅವರನ್ನು ಮೂಲ ಸ್ಥಳಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.

Share

Leave a Comment