ವರ್ಣರಂಜಿತ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಅದ್ಧೂರಿ ತೆರೆ

* ಪೈಲ್ವಾನ್ ಕುಸ್ತಿ – ಕಲ್ಲು ಎತ್ತುವ ಸ್ಪರ್ಧೆಗೆ ಭಾರೀ ಜನಸ್ತೋಮ
ರಾಯಚೂರು.ಜೂ.19- ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ನಿನ್ನೆ ಅದ್ಧೂರಿ ತೆರೆ ಬಿದ್ದಿತು.
ಸಂಜೆ 5 ಗಂಟೆಗೆ ರಾಜೇಂದ್ರ ಗಂಜ್ ಆವರಣದಲ್ಲಿ ಆಯೋಜಿಸಿದ್ದ ಪೈಲ್ವಾನ್ ಕುಸ್ತಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮತ್ತೊಂದು ಆಕರ್ಷಕ ಕ್ರೀಡೆಯಾಗಿ ನೆರೆ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದ ಪೈಲ್ವಾನರು ತಮ್ಮ ಬಲಪ್ರದರ್ಶನ ತೋರಿದರು.
ಪೈಲ್ವಾನ್ ಕುಸ್ತಿ ವೀಕ್ಷಣೆಗೆ ಜನ ಕಿಕ್ಕಿರಿದು ನೆರೆದಿದ್ದರು. ಪೈಲ್ವಾನ್ ಕುಸ್ತಿಗಾಗಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ನಿರ್ವಾಹಕರು ಪ್ರತ್ಯೇಕವಾಗಿ ಮೈದಾನ ಏರ್ಪಡಿಸಿದ್ದರು. ಸ್ವತಃ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು ಪಂದ್ಯ ನಿರ್ಣಾಯಕರಾಗಿ ಪೈಲ್ವಾನ್ ಕುಸ್ತಿ ನಿರ್ವಹಿಸಿದರು. ಕುಸ್ತಿ ಪಟುಗಳು ತಮ್ಮ ಪಟುಗಳನ್ನು ಬದಲಿಸುತ್ತಾ, ವಿರೋಧಿಯನ್ನು ಚಿತ್ತ ಹಾಕಲು ನಡೆಸಿದ ಪ್ರಯತ್ನ ರೋಚಕವಾಗಿತ್ತು.
ಕುಸ್ತಿ ವೀಕ್ಷಣೆಗೆ ಬಂದ ಪ್ರೇಕ್ಷಕರು ಈ ಸ್ಪರ್ಧಾಳುಗಳ ಜಿದ್ದಾಜಿದ್ದಿ ಪೈಪೋಟಿಗೆ ಪ್ರಚೋದಿತಗೊಂಡು ತಮ್ಮ ಅಭಿಮಾನಿ ಪೈಲ್ವಾನರನ್ನು ಬೆಂಬಲಿಸಲು ತೀವ್ರ ಕೂಗಾಟ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಕಳೆದ 19 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ನಿಮಿತ್ಯ ಕುಸ್ತಿ ಪಂದ್ಯ ನಡೆಯುತ್ತದೆ. ಈ ಪಂದ್ಯಾವಳಿ ಅತ್ಯಂತ ಜನಪ್ರಿಯ ಪಂದ್ಯಾವಳಿಯಾಗಿದೆ.
ಮತ್ತೊಂದು ಕಡೆ ಶ್ರೀ ಲಕ್ಷ್ಮಮ್ಮ ದೇವಿ ದೇವಸ್ಥಾನ ಬಳಿ ಭಾರದ ಕಲ್ಲು ಎತ್ತುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆ ವೀಕ್ಷಣೆಗೂ ಭಾರೀ ಸಂಖ್ಯೆಯ ಜನ ನೆರೆದಿದ್ದರು. ಬಂಗಿ ನರಸರೆಡ್ಡಿ ಸೇರಿದಂತೆ ಅನೇಕರು ಈ ಕಾರ್ಯಕ್ರಮ ನಿರ್ವಹಿಸಿದರು.

Leave a Comment