ವರುಣ ನಾಲೆಯಲ್ಲಿ ಅಪರಿಚಿತ ಶವಗಳು ಪತ್ತೆ

ಮೈಸೂರು, ಅ.18 – ಮೈಸೂರು ತಾಲ್ಲೂಕಿನ ಕಡುಬನಕಟ್ಟೆ ಗ್ರಾಮದ ವರುಣ ನಾಲೆಯಲ್ಲಿ ಅಪರಿಚಿತ ಶವಗಳು ಪತ್ತೆಯಾಗಿವೆ.

ಓರ್ವ ಮಹಿಳೆ, ಓರ್ವ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇತ್ತೀಚೆಗೆ ಕಾಣೆಯಾಗಿರುವವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುವ ಮೂಲಕ ತನಿಖೆ ತೀವ್ರಗೊಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Comment