ವರುಣಾ ನಾಲೆಯಲ್ಲಿ ಆಕಸ್ಮಿಕವಾಗಿ ಬಿದ್ದು ಕೊಚ್ಚಿ ಹೋದ ಯುವಕ

ಮೈಸೂರು, ಅಕ್ಟೋಬರ್ 12: ಯುವಕನೊಬ್ಬ ಬೃಂದಾವನ ರಸ್ತೆಯಲ್ಲಿರುವ ವರುಣಾ ನಾಲೆಯಲ್ಲಿ ಶುಕ್ರವಾರ ತಡರಾತ್ರಿ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ಮೈಸೂರಿನ ಕುವೆಂಪು ನಗರದ ಹುಡ್ಕೋ ಬಡಾವಣೆಯ ರಾಕೇಶ್ (24) ಎಂಬಾತನೇ ನೀರಿನಲ್ಲಿ ಕೊಚ್ಚಿ ಹೋದವ. ಶುಕ್ರವಾರ ರಾತ್ರಿ 11 ಗಂಟೆಯಲ್ಲಿ ಸ್ನೇಹಿತರ ಜತೆ ನಾಲೆ ಬಳಿ ಮಾತನಾಡುತ್ತ ಕುಳಿತಿದ್ದ ಈತ ಆಯತಪ್ಪಿ ನಾಲೆಗೆ ಬಿದ್ದಿರುವುದಾಗಿ ತಿಳಿದುಬಂದಿದೆ.
ಜತೆಗಿದ್ದ ಇಬ್ಬರು ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರಾದರೂ ನೀರಿನ ರಭಸ ಹೆಚ್ಚಾಗಿದ್ದರಿಂದ, ರಾಕೇಶ್ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ. ಈ ಕುರಿತು ಕೆ.ಆರ್.ಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

Leave a Comment