ವರುಣನ ಆರ್ಭಟಕ್ಕೆ ನೀರಗಂಟೆ ನಾಪತ್ತೆ

ದಾವಣಗೆರೆ, ಅ. 23- ಜಗಳೂರು ತಾಲ್ಲೂಕಿನಾದ್ಯಂತ ನಿನ್ನೆ ಸುರಿದ ವರುಣನ ಆರ್ಭಟಕ್ಕೆ ಕಟ್ಟಿಗೆಹಳ್ಳಿ ಗ್ರಾಮದ ನೀರಗಂಟೆ ಕೊಚ್ಚಿ ಹೋದ ಶಂಕೆ ವ್ಯಕ್ತವಾಗಿದೆ. ಹಳ್ಳ ದಾಟುವಾಗ ನೀರುಗಂಟಿ ಎ.ಕೆ.ಬಸವರಾಜ್ ನಾಪತ್ತೆಯಾಗಿರುವ ಘಟನೆ ಸುಮಾರು ನಿನ್ನೆ ರಾತ್ರಿ 7-30 ರ ಸುಮಾರಿನಲ್ಲಿ ಸಂಭವಿಸಿದೆ. ಊರಿಗೆ ನೀರು ಬಿಡಲು ಹೋದಾಗ ಹಳ್ಳದಲ್ಲಿ ರಭಸವಾಗಿ ಹರಿಯುತ್ತಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.. ಸ್ಥಳಕ್ಕೆ 10 ಕ್ಕೂ ಹೆಚ್ಚು ಎನ್ ಡಿಆರ್ ಎಫ್ ತಂಡದಿಂದ ಕಾರ್ಯಾಚರಣೆ ಆರಂಭವಾಗಿದೆ. ಇನ್ನು ನೀರುಗಂಟೆ ಬಸವರಾಜ್ ಇನ್ನು ಪತ್ತೆಯಾಗಿಲ್ಲ, ತಂಡದಿಂದ ಕಾರ್ಯಾಚರಣೆ ಮುಂದುವರೆದಿದೆ.

Leave a Comment