ವರದಿಗಾರನ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ,ಜೂ.18-ಖಾಸಗಿ ಚಾನಲ್ ವರದಿಗಾರನ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿದ‌ ಘಟನೆ  ಕಿತ್ತೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಬಸವರಾಜು ಪಾಟೀಲ ಹಲ್ಲೆಗೊಳಗಾದ ಪರ್ತಕರ್ತ ಎಂದು ಗುರುತಿಸಲಾಗಿದೆ.
ವೀರಾಪುರ ಗ್ರಾಮದ ರಾಯಪ್ಪ ಅಂಬಡಗಟ್ಟಿ ಎಂಬ ವ್ಯಕ್ತಿ ಪರ್ತಕರ್ತ ಬಸವರಾಜು ಪಾಟೀಲ ಮನೆಗೆ ಬಂದು ಏಕಾಏಕಿ ಕೊಡಲಿಯಿಂದ ದಾಳಿ ನಡೆಸಿದ್ದಾನೆ.
ಗ್ರಾಮಸ್ಥರ ಮೇಲೆ ಏಕಾಎಕಿ ಗುಂಡಾಗಿರಿ, ಹಲ್ಲೆ ಮಾಡುತ್ತಿದ್ದ ರಾಯಪ್ಪನ ಗುಂಡಾಗಿರಿ ವರ್ತನೆಯ ಬಗ್ಗೆ ಪತ್ರಕರ್ತ ಬಸವರಾಜು ಅವರು ಪೊಲೀಸರ ಗಮನಕ್ಕೆ ತಂದಿದ್ದರ ಹಿನ್ನೆಲೆಯಲ್ಲಿ   ನನ್ನ ಬಗ್ಗೆ ಪೊಲೀಸರಿಗೆ ಏಕೆ ವರದಿ ಕೊಟ್ಟಿರುವೇ ಎಂದು ರಾಯಪ್ಪ, ಪತ್ರಕರ್ತ ಬಸವರಾಜು ಮನೆಗೆ ನುಗ್ಗಿ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.
ಗಂಭೀರ ಗಾಯಗೊಂಡ ಪರ್ತಕರ್ತ ಬಸವರಾಜು ಅವರನ್ನು ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ತಡರಾತ್ರಿಯಲ್ಲಿ ರಾಯಪ್ಪನನ್ನು ವಶಕ್ಕೆ ಪಡೆದ ಪೊಲೀಸರು  ವಿಚಾರಣೆ ನಡೆಸಿದ್ದಾರೆ.

Leave a Comment