ವರದಕ್ಷಿಣೆ ಕಿರುಕುಳ : ಮಹಿಳೆ ಆತ್ಮಹತ್ಯೆ

ಕಲಬುರಗಿ,ಡಿ.6-ಪತಿ ಮತ್ತು ಆತನ ಕುಟುಂಬದವರು ನೀಡುತ್ತಿದ್ದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನೇಣು ಹಾಕಿಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಅಂಬಿಕಾ ನಗರದಲ್ಲಿ ನಡೆದಿದೆ.

ಮೀನಾಕ್ಷಿ ಅಲಿಯಾಸ್ ಸನ್ನಿಧಿ ಆನಂದ ಯನಗುಂಟಿಕರ್ (26) ಆತ್ಮಹತ್ಯೆಗೆ ಶರಣಾದ ಮಹಿಳೆ.

ಪತಿ ಆನಂದ ಛಾಯಾಗ್ರಾಹಕನಾಗಿದ್ದು, ಕಳೆದ ಎರಡುವರೆ ವರ್ಷಗಳ ಹಿಂದಷ್ಟೇ ಈ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಪತಿ ಆನಂದ ಮತ್ತು ಆತನ ಕುಟುಂಬದವರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಮೀನಾಕ್ಷಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Comment