ವರದಕ್ಷಿಣೆ ಕಿರುಕುಳ : ಮಹಿಳೆ ಆತ್ಮಹತ್ಯೆ

ಕಲಬುರಗಿ,ಮೇ.19-ಗಂಡನ ಮನೆಯವರು ನೀಡುತ್ತಿದ್ದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಾಬಾದ ನಗರದ ಉಮರ್ ಫಾರುಕ್ ಕಾಲೋನಿಯಲ್ಲಿ ನಡೆದಿದೆ.
ರುಬಿನಾಬೇಗಂ ಗಂಡ ಸೈಯದ್ ನಜುಮುಲ್ಲಾ ಹಸನ್ ಆತ್ಮಹತ್ಯೆಗೆ ಶರಣಾದ ಮಹಿಳೆ.
ಎರಡು ವರ್ಷದ ಹಿಂದೆ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ 50 ಸಾವಿರ ರೂ. ನಗದು, 2 ತೊಲಿ ಬಂಗಾರ, 3 ಜೊತೆ ಕಿವಿಯೋಲೆ ನೀಡಲಾಗಿತ್ತು. ಒಂದು ವರ್ಷದವರೆಗೆ ಚೆನ್ನಾಗಿಯೇ ನೋಡಿಕೊಂಡಿದ್ದರು. ನಂತರ ತವರು ಮನೆಯಿಂದ 1 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಗಂಡ, ಅತ್ತೆ, ಭಾವ, ನಾದಿನಿ ಕಿರುಕುಳ ನೀಡಿದ್ದರಿಂದ ತವರು ಮನೆಗೆ ಹೋಗಿದ್ದರು. ಗುರುವಾರ ಗಂಡನ ಮನೆಗೆ ಹೋಗಿದ್ದು, ಮತ್ತೆ ವರದಕ್ಷಿಣೆ ಕಿರುಕುಳ ನೀಡಿದ್ದರಿಂದ ಬೇಸತ್ತು ಮನೆಯಲ್ಲಿನ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಹಿಳೆಯ ಪಾಲಕರು ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
@12bc = ಗಾಯಗೊಂಡಿದ್ದ ವ್ಯಕ್ತಿ ಸಾವು
ಬೈಕ್ ಸ್ಕಿಡ್ಡಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಕೆರೆಭೋಸಗಾ ಗ್ರಾಮದ ಕಾಶೀನಾಥ ತಂದೆ ಕುಮಾರ ಗೋಳ್ಯಾ ಮೃತಪಟ್ಟವರು.
ಕೆರೆಭೋಸಗಾ ಹತ್ತಿರ ಬೈಕ್ ಸ್ಕಿಡ್ಡಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಲ್ಲಾಪುರದಿಂದ ಕೆರೆಭೋಸಗಾ ಗ್ರಾಮಕ್ಕೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment