ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಕೊಲೆ

=

ಕಲಬುರಗಿ,ಜೂ.12-ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ನಗರದ ಬ್ರಹ್ಮಪುರ ಬಡಾವಣೆಯ ಕೊಂಡೇದಗಲ್ಲಿಯಲ್ಲಿ ನಡೆದಿದೆ.

ರೀನಾ ಕೊಲೆಯಾದವರು. ಪತಿ ಬಹಾದ್ದೂರಸಿಂಗ್ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆ ಎಂದು ಮೃತಳ ತಾಯಿ ಭವಾನಿಬಾಯಿ ಠಾಕೂರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

8.12.2015 ರಂದು ರೀನಾ ಬಹಾದ್ದೂರಸಿಂಗ್ ಜೊತೆ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ 50 ಗ್ರಾಂ. ಬಂಗಾರ ನೀಡಲಾಗಿತ್ತು. ಕಾರು ಖರೀದಿಸಲು ಮತ್ತು ಮನೆ ಕಟ್ಟಲು ತವರು ಮನೆಯಿಂದ ಹಣ ತರುವಂತೆ ಪತಿ ಬಹಾದ್ದೂರಸಿಂಗ್ ಪತ್ನಿ ರೀನಾಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ ಹೊಟ್ಟೆಗೆ ಬಲವಾಗಿ ಒದ್ದಿದ್ದರಿಂದ ರೀನಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ರೀನಾ ಮೃತಪಟ್ಟಿದ್ದು, ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಹಾದ್ದೂರಸಿಂಗ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

Leave a Comment