ವಯಸ್ಸಾದವರ ಆಹಾರ ಕ್ರಮ

ನಮಗೆ ವಯಸ್ಸಾಗುತ್ತಿದ್ದಂತೆ ಅನೇಕ ರೋಗ ರುಜಿನಗಳು ನಮ್ಮನ್ನು ಆವರಿಸತೊಡಗುತ್ತವೆ. ಅದರಲ್ಲೂ ಈಗಿನ ಜೀವನ ಶೈಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವ ಜನತೆಯೇ ಕಾಯಿಲೆಗಳ ಪಾಲಾಗುತ್ತಿದ್ದಾರೆ. ಕೇವಲ ೩೫ – ೪೦ ವಯಸ್ಸಿಗೆ ಬಿಪಿ, ಶುಗರ್, ಹೃದಯ ಸಮಸ್ಯೆ ಇತ್ಯಾದಿ ಸಮಸ್ಯೆಗಳ ದಾಸರಾಗುತ್ತಾರೆ.

ಒಮ್ಮೆ ಈ ಯಾವುದಾದರೂ ಕಾಯಿಲೆಯ ಗುಣ ಲಕ್ಷಣಗಳು ಗೋಚರವಾಗಲು ಪ್ರಾರಂಭವಾದರೆ, ಮನುಷ್ಯನ ನೆಮ್ಮದಿ ಹಾಳದಂತೆ ಹಾಗಾಗಿ ವೈದ್ಯರು ಕೊಡುವ ಸಲಹೆಯಂತೆ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಈ ಆಹಾರಗಳನ್ನು ಸೇವಿಸುವುದು ಓಳ್ಳೆಯದು ಸಾಮಾನ್ಯವಾಗಿ ಮಧುಮೇಹ ರೋಗಿಗಳಿಗೆ ವೈದ್ಯರು ಬಾದಾಮಿ ಬೀಜಗಳನ್ನು ಸೇವಿಸಲು ಸೂಚಿಸುತ್ತಾರೆ. ಕಾರಣ ಏನೆಂದರೆ ಅವರ ದೇಹದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿರೀಕ್ಷಿತ ಮಟ್ಟದಲ್ಲಿ ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಹೃದಯ ರಕ್ತ ನಾಳದ ಸೋಂಕಿನ ವಿರುದ್ಧ ಹೋರಾಡಿ ಮಧುಮೇಹವನ್ನು ನಿವಾರಿಸುವುದರ ಜೊತೆಗೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.

ಸೋಯಾ ಬೀನ್ಸ್ ಕಾಳುಗಳಲ್ಲಿ ಎಂಬ ಅಂಶವಿದ್ದು, ಇದು ಮನುಷ್ಯನ ದೇಹದ ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೂಳೆಗಳ ವಿಷಯಕ್ಕೆ ಬಂದರೆ, ಅವುಗಳ ಆರೋಗ್ಯವನ್ನು ಹೆಚ್ಚಿಸಿ ಸಾಂದ್ರತೆಯನ್ನು ವೃದ್ಧಿ ಪಡಿಸುತ್ತದೆ.
ಟೊಮೆಟೊಗಳು ” ಲೈಕೋಪಿನ್ ” ಎಂಬ ಆಂಟಿ – ಆಕ್ಸಿಡೆಂಟ್ ಅಂಶವನ್ನು ತಮ್ಮಲ್ಲಿ ಹೊಂದಿವೆ. ಈ ಅಂಶ ಮನುಷ್ಯನ ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ರೂಪುಗೊಳ್ಳದಂತೆ ಮತ್ತು ಬೇರೆಡೆಗೆ ಹರಡದಂತೆ ತಡೆಯುತ್ತದೆ. ಇದರ ಜೊತೆಗೆ ಅಪಧಮನಿಗಳನ್ನು ಸಮಸ್ಯೆಯಿಂದ ಕಾಪಾಡುತ್ತದೆ. ಇನ್ನು ಟೊಮೆಟೊ ಜ್ಯೂಸ್ ಹೊಟ್ಟೆಯ, ಶ್ವಾಸಕೋಶದ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಕಾಯಿಲೆಯಿಂದ ಮನುಷ್ಯರನ್ನು ರಕ್ಷಿಸುತ್ತದೆ. ಹೃದಯದ ತೊಂದರೆ ಇರುವವರೂ ಕೂಡ ಟೊಮೇಟೊಗಳ ಸೇವನೆಯಿಂದ ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮೀನು. ಇದರಲ್ಲಿ ಯಥೇಚ್ಛವಾಗಿ ಒಮೆಗಾ – ೩ ಫ್ಯಾಟಿ ಆಸಿಡ್ ಅಂಶಗಳು ಸೇರಿವೆ. ಹೃದಯದ ತೊಂದರೆ ಇರುವವರಿಗೆ ಈ ಅಂಶಗಳು ಬಹಳ ಉಪಯುಕ್ತ. ಜೊತೆಗೆ ಮೀನಿನ ಸೇವನೆಯಿಂದ ವಯಸ್ಸಾದಂತೆ ಕಾಡುವ ಮರೆವಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಧೂಮಪಾನದ ಅಭ್ಯಾಸ ಇರುವವರು ತಮ್ಮ ದೇಹದಲ್ಲಿ ಮೆದುಳಿನಿಂದ ಹರಿದು ಬಂದಿರುವ ನರನಾಡಿಗಳ ಹಾನಿಯನ್ನು ಮೀನಿನ ಸೇವನೆಯಿಂದ ಕಾಪಾಡಿಕೊಳ್ಳಬಹುದು.
ಬ್ಲೂ ಬೆರ್ರಿ ಹಣ್ಣುಗಳಲ್ಲಿ ಆಂಟಿ – ಆಕ್ಸಿಡೆಂಟ್ ಅಂಶಗಳು ಬಹಳಷ್ಟಿವೆ. ಜೊತೆಗೆ ಅನೇಕ ಪೌಷ್ಟಿಕ ಸತ್ವ ಗಳಾದ ನಾರಿನ ಅಂಶ, ವಿಟಮಿನ್ ’ ಸಿ ’, ವಿಟಮಿನ್ ’ ಕೆ ’, ಎಲೆಕ್ಟ್ರೋಲೈಟ್ ಮತ್ತು ಇನ್ನಿತರ ವಿಟಮಿನ್ ಗಳು ಮತ್ತು ಖನಿಜಾಂಶಗಳು ಬ್ಲೂ ಬೆರ್ರಿ ಹಣ್ಣುಗಳಲ್ಲಿ ಸೇರಿವೆ. ನಿಮಗೆ ವಯಸ್ಸಾಗುತ್ತಾ ಇದ್ದಂತೆ ನಿಮ್ಮ ದೇಹದ ಅಂಗಾಂಗಗಳ ಚಲನೆ ಮತ್ತು ಕಾರ್ಯ ಚಟುವಟಿಕೆ ಕುಂಠಿತಗೊಳ್ಳುತ್ತದೆ. ಮೊದಲಿನಂತೆ ನಿಮ್ಮ ಕೈ ಕಾಲುಗಳನ್ನು ಸರಾಗವಾಗಿ ಆಡಿಸಲು ಸಾಧ್ಯವಾಗುವುದಿಲ್ಲ. ದೇಹಕ್ಕೆ ಸರಿಯಾದ ಪೌಷ್ಟಿಕಾಂಶಗಳನ್ನು ಒದಗಿಸುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು. ಕಡಿಮೆ ಕ್ಯಾಲೋರಿಗಳಿರುವ ಬ್ಲೂ ಬೆರ್ರಿ ಹಣ್ಣುಗಳು ಮನುಷ್ಯನ ದೇಹಕ್ಕೆ ಅದರಲ್ಲೂ ೪೦ ವರ್ಷ ದಾಟಿದ ವ್ಯಕ್ತಿಗಳಿಗೆ ಬಹಳ ಸೂಕ್ತವೆಂದು ಸಾಬೀತು ಪಡಿಸಿವೆ.
ಅಡುಗೆಗಳಲ್ಲಿ ಉಪಯೋಗವಾಗುವ ಚಕ್ಕೆ ಅಥವಾ ದಾಲ್ಚಿನ್ನಿ ವಯಸ್ಸಾಗುತ್ತಿದ್ದಂತೆ ಎದುರಾಗುವ ಮಧುಮೇಹಕ್ಕೆ ಒಳ್ಳೆಯ ಮನೆಮದ್ದು. ದೇಹದಲ್ಲಿ ಹೆಚ್ಚಾದ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ಕಡಿಮೆ ಮಾಡುತ್ತದೆ. ನೀವು ಸೇವಿಸುವ ಆಹಾರದ ಮೇಲೆ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ ಸೇವಿಸುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಕಾಣಬಹುದು.
ಬೆಳ್ಳುಳ್ಳಿಯಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಬಹಳಷ್ಟು ಪೌಷ್ಟಿಕ ಸತ್ವಗಳು ಅಡಗಿವೆ. ಎಲ್ಲಾ ವಯಸ್ಸಿನವರಿಗೂ ಸೂಕ್ತವಾದ ಈ ಆಹಾರ ಪದಾರ್ಥ ೪೦ ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ. ಅಧಿಕ ರಕ್ತದ ಒತ್ತಡ ಹೊಂದಿರುವ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಹೃದಯ ಸಂಬಂಧಿ ಸಮಸ್ಯೆಗಳು ಒಂದಾದ ಮೇಲೊಂದರಂತೆ ಕಾಡಲು ಪ್ರಾರಂಭವಾಗುತ್ತವೆ. ಮುಖ್ಯವಾಗಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ಡಿಮೆನ್ಷಿಯಾ ಸಮಸ್ಯೆ ಕೂಡ ಎದುರಾಗುತ್ತದೆ. ಈ ಎಲ್ಲಾ ಪ್ರಮುಖ ಸಮಸ್ಯೆಗಳಿಂದ ಪಾರಾಗಬೇಕಾದರೆ ಮೊದಲು ಸಾಧ್ಯವಾದಷ್ಟು ಆಹಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಉಪಯೋಗ ಮಾಡಬೇಕು.

Leave a Comment