ವಜ್ರಮುಷ್ಠಿ ಕಾಳಗ ಮೈಸೂರು ಮಹಾರಾಜರು ನೀಡಿರುವ ಕೊಡುಗೆ

ಚಾಮರಾಜನಗರ ಆಗಷ್ಟ್. 06- ಜಟ್ಟಿ ಜನಾಂಗಾದಲ್ಲಿಯು ಸಾಂಸ್ಕೃತಿಕವಾಗಿಯು ಬೆಳೆದಿರುವ ಕಲೆಗಾರರು ಇದ್ದಾರೆ. ಅದರಲ್ಲಿ ಮುಖ್ಯವಾಗಿ ಮೈಸೂರಿನ ಅರಮನೆಯಲ್ಲಿ ದಸರಾ ಸಂದರ್ಭದಲ್ಲಿ ನಡೆಯುವ ವಜ್ರಮುಷ್ಠಿ ಕಾಳಗ ಎಂದು ಜೆಟ್ಟಿ ಜನಾಂಗ ವೇದೀಕೆ ಅಧ್ಯಕ್ಷ ನಿಜಧ್ವನಿ ಗೋವಿಂದರಾಜು ತಿಳಿಸಿದರು.
ನಗರದ ದೇವಾಂಗ ಭವನದಲ್ಲಿ ನಡೆದ ಚಾಮರಾಜನಗರ ಜೆಟ್ಟಿ ಜನಾಂಗದ ವೇದಿಕೆಯಿಂದ ಕಲಾವಿದರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಿ ಮಾತನಾಡಿದರು.
ದೇಶದ ಮೂಲೆಮೂಲೆಗಳಲ್ಲಿಯು ಜಟ್ಟಿ ಜನಾಂಗವೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮೈಸೂರಿನ ಅರಮನೆಯಲ್ಲಿ ರಾಜರ ಕಾಲದಲ್ಲಿ ಸಾಹಿತ್ಯ, ಸಂಗೀತ, ಕುಸ್ತಿಗಳಲ್ಲಿ ಜಗಜೆಟ್ಟಿಗಳು ಭಾಗವಹಿಸುತ್ತಿದ್ದರು ದಸರಾ ಸಂದರ್ಭದಲ್ಲಿ ಪ್ರಥಮವಾಗಿ ಜಂಬೂ ಸವಾರಿ ಚಾಲನೆಗೂ ಮೊದಲು ರಾಜ್ಯ ಎರಡು ಜಿಲ್ಲೆಗಳ ಜಟ್ಟಿಗಳ ವಜ್ರಮುಷ್ಠಿ ಕಾಳಗ ನಡೆಯುತ್ತದೆ. ಇದು ನಮಗೆ ಮೈಸೂರು ಮಹಾರಾಜರು ನೀಡಿರುವ ಕೊಡುಗೆ ಎಂದು ತಿಳಿಸಿದರು.
ಪ್ರತಿವರ್ಷವು ಜೆಟ್ಟಿ ಜನಾಂಗದ ವೇದಿಕೆಯಿಂದ ಸಾಂಸ್ಕೃತಿಕವಾಗಿ ಸಾಹಿತ್ಯ, ಕುಸ್ತಿ, ಹಾಗೂ ಇನ್ನು ಅಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಅತಿಹೆಚ್ಚು ಮೈಸೂರಿನ ವಜ್ರಮುಷ್ಠಿ ಕಾಳಗದಲ್ಲಿ ಚಾಮರಾಜನಗರದ ಜೆಟ್ಟಿಗಳೇ ಭಾಗವಹಿಸಿರುವುದು ಸಂತೋಷವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಜ್ರಮುಷ್ಠಿ ಕಾಳಗದ ತರಬೇತುದಾರ ಪುಟ್ಟಣ್ಣ, ಹಾಗೂ ಸಾಹಿತಿ ಮತ್ತು ಕಲಾವಿದ ವೆಂಕಟೇಶ್‍ಬಾಬು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಉಪಾಧ್ಯಕ್ಷ ಕಿಶೋರ್‍ಕುಮಾರ್, ಖಜಾಂಚಿ ಉಪೇಂದ್ರಕುಮಾರ್, ಚಾ.ಶ್ರೀ ಜಗದೀಶ್, ಜಯಕುಮಾರ್, ಚಂದ್ರಕುಮಾರ್, ಪುನೀತ್, ಮೋಹನ್, ನಾಗಭೂಷನ್, ರವಿ, ಚಂದ್ರು, ರಘು, ಸುಚಿತ್ರ, ಸರಳದೇವಿ, ರೂಪ,ಭಾನು, ಕಾವ್ಯ, ಪ್ರೇಮ, ಶರವಣಕುಮಾರಿ, ಪುಷ್ಪ, ರಾಧಿಕ, ಜಯಂತಿ, ಲಕ್ಷ್ಮಿ, ಮುತ್ತುಲಕ್ಷ್ಮಿ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Comment