ವಜ್ರದ ಬೆನ್ನತ್ತಿ…

ಕನ್ನಡದಲ್ಲಿ ಆಗಾಗ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಚಿತ್ರಗಳು ಆಗಾಗ ಬರುತ್ತಿವೆ. ಇದೀಗ ಅದರ ಸಾಲಿಗೆ ಮತ್ತೊಂದು ಚಿತ್ರ “ರುದ್ರಾಕ್ಷಿ ಪುರ” ಹೊಸಸೇರ್ಪಡೆ.

ಹಲವು ಕುತೂಹಲಕಾರಿ ಚಿತ್ರದಲ್ಲಿ ಕೊನೆಗೆ ವಜ್ರ ಸಿಕ್ಕರೆ. ಈ ಚಿತ್ರದಲ್ಲಿಯೇ ಆರಂಭದಲ್ಲಿಯೇ ವಜ್ರ ಸಿಗುವುದರಿಂದ ಚಿತ್ರ ಆರಂಭಗೊಳ್ಳಲಿದೆ..ಈಶ್ವರನ ದೇವಸ್ಥಾನಕ್ಕೆ ಸೇರಿದರಿಂದ ಊರ ಹೆಸರು ರುದ್ರಾಕ್ಷಿಪುರ ಎಂದು ಮಾತಿಗಿಳಿದರು ನಿರ್ದೇಶಕ ಈಶ್ವರ್ ಕೋಲಂಕಿ…

ಚಿತ್ರವನ್ನು ಬೆಂಗಳೂರು ,ಗುಬ್ಬಿ ಚನ್ನ ಬಸವೇಶ್ವರ ದೇವಾಲಯ,ಮರುಡೇಶ್ವರ,ಉಡುಪಿ ಬೀಚ್ ಮತ್ತಿತರ ಕಡೆ ೨೮ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.ಚಿತ್ರದಲ್ಲಿ ಮೂರು ಹಾಡು ನಾಲ್ಕು ಪೈಟ್ ಗಳಿವೆ ಉತ್ತಮವಾಗಿ ಮೂಡಿಬಂದಿದೆ. ಇದೊಂದು ಕಾಲ್ಪನಿಕ ಕಥೆ. ಚಿತ್ರೀಕರಣ ಪೂರ್ಣಗಡಿದ್ದು ಮುಂದಿನ ತಿಂಗಳು ತೆರೆಗೆ ತರುವ ಎಲ್ಲಾ ಸಾದ್ಯತೆಗಳಿವೆ ಎಂದು ಮಾತಿಗೆ ವಿರಾಮ ಹಾಕಿದರು. ಕಳೆದವಾರ ಕಲಾವಿದರ ಸಂಘದಲ್ಲಿ ಚಿತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಇತ್ತು .ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.

ನಟಿ ರೂಪಿಕಾ,ಆಭರಣ ಸಂಶೋದನೆ ಮಾಡುವ ಪಾತ್ರ .ಸೈನ್ಸ್ ಫಿಕ್ಷನ್ ಆದರ್ ಕಮರ್ಷಿಯಲ್ ಎಲಿಮೆಂಟ್ ಚಿತ್ರದಲ್ಲದೆ. ಮೂಲ ಕ್ಲಾಸಿಕಲ್ ಡ್ಯಾನ್ಸರ್ ಸುದೀಪ್‌ಪ್‌ಆಗಿರುವುದರಿಂದ ಚಿತ್ರದಲ್ಲಿ ಡ್ಯಾನ್ಸ್ ಕೂಡ ಇದೆ.ಎನ್ ಜಿಓ ದಲ್ಲಿ ಕೆಲಸ ಮಾಡುವ ಸಮಯದಲ್ಲಿ ಹಾಡು ಬರಲಿದೆ. ಚಿತ್ರಕ್ಕಾಗಿ ವಜ್ರದ ಸಂಶೋಧನ ಕೇಂದ್ರಕ್ಕೂ ಭೇಟಿ ನೀಡುವ ಅವಕಾಶ ಸಿಕ್ಕಿತ್ತು.ವಜ್ರ ಪರಿಶೀಲಿಸಲು ೭ ಹಂತಗಳಿವೆ ಒಳ್ಳೆ ಅನುಭವ ನೀಡಿದೆ ಎಂದು ಹೇಳಿಕೊಂಡರು.

ನಟ ಅರ್ಜುನ್ ಚೌಹ್ಹಾಣ್, ಸಿನಿಮಾದಲ್ಲಿ ನಟಿಸುವುದಕ್ಕೂ ಕಿರುತೆರೆಯಲ್ಲಿ ಅನೇಕ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದೇನೆ. ನಾನೊಬ್ಬ ಕಳ್ಳ.ನನ್ನ ಉದ್ದೇಶವೇ ಬೇರೆಯಾಗಿರುತ್ತದೆ. ವಜ್ರ ಸಿಕ್ಕ ನಂತರ ವಜ್ರ ಸಿಕ್ಕ ಬಳಿಕ ಆ ಕೆಲಸ ಬಿಟ್ಟುಬಿಡುತ್ತೇನೆ. ವಜ್ರಕ್ಕೆ ಇರುವ ಸಂಬಂಧ ಮತ್ತು ಅದರ ಹಿನ್ನೆಲೆ ಕುತೂಹಲಕಾರಿಯಾಗಿದೆ. ಚಿತ್ರದಲ್ಲಿ ಕನ್ನಡ ,ತೆಲುಗು ,ತಮಿಳು,ಇಂಗ್ಲೀಷ್ ಮತ್ತು ಹಿಂದಿ ಬಳಸಿ ಹಾಡು ಸಿದ್ದಪಡಿಸಲಾಗಿದೆ. ಭಾಷೆ ಬೇರೆಯಾದರೂ ಹಾಡಿನ ದಾಟಿಗೆ ಅದು ಎಲ್ಲಿಯೂ ಅಡ್ಡಿಯಾಗಿಲ್ಲ ಎಂದರು.

ಪವನ್ ಪಾರ್ಥ ಸಂಗೀತ ,ಸುದೀಪ್ ಪ್ಯಾಟ್ರಿಕ್ ಕ್ಯಾಮರ ಕೆಲಸವಿದೆ.ಅಂದಹಾಗೆ ಚಿತ್ರಕ್ಕೆ ನಾಗರಾಜ್ ಮುರುಡೇಶ್ವರ ಬಂಡವಾಳ ಹಾಕಿದ್ದು ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರ ಸಹಕಾರ ಬೆಂಬಲ ಬೇಕು ಎಂದು ಕೇಳಿಕೊಂಡರು.ರವಿಚೇತನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್ ಮತ್ತಿತರರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭಹಾರೈಸಿದರು.

Leave a Comment