ವಚನ ಸಂಕ್ರಾಂತಿ ಕಾರ್ಯಕ್ರಮ ನಾಳೆಯಿಂದ

ಕಲಬುರಗಿ ಜ 12: ಕಲಬುರಗಿ ಬಸವ ಸಮಿತಿಯು ಎರಡು ದಿನಗಳ ವಚನ ಸಂಕ್ರಾಂತಿ ಕಾರ್ಯಕ್ರಮವನ್ನು ನಾಳೆ( ಜನವರಿ 13) ಯಿಂದ ನಗರದ ಕುಸನೂರು ರಸ್ತೆ ಜಯನಗರ ಡಾಕ್ಟರ್ಸ್ ಕಾಲೋನಿಯ ಅನುಭವ ಮಂಟಪದಲ್ಲಿ ಆಯೋಜಿಸಿದೆ.
ವಚನವನ್ನು ಸಂಗೀತಬದ್ಧವಾಗಿ ಹಾಡಲು ಕಲಿಯುವ ಇಚ್ಛೆ ಉಳ್ಳವರಿಗೆ ಕಲಬುರಗಿ ಬಸವ ಸಮಿತಿಯು ವಚನ ಸಂಗೀತ ಶಾಲೆಯನ್ನು ಆರಂಭಿಸುತ್ತಿದೆ. ನಾಳೆ ( ಜನವರಿ 13) ಸಂಜೆ 5 ಗಂಟೆಗೆ ಮೈಸೂರಿನ ಡಾ ಗಂಗೂಬಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ ಸರ್ವಮಂಗಳ ಶಂಕರ ಅವರು ವಚನ ಸಂಗೀತ ಶಾಲೆ ಮತ್ತು ವಚನ ಸಂಕ್ರಾಂತಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಕಲಬುರಗಿ ಬಸವ ಸಮಿತಿ ಅಧ್ಯಕ್ಷರಾದ ಡಾ ವಿಲಾಸವತಿ ಖೂಬಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ನಡೆಯುವ ವಚನ ಸಂಕ್ರಾಂತಿ ಗಾಯನ ಕಾರ್ಯಕ್ರಮದಲ್ಲಿ ಪಂಡಿತ ಡಿ ಕುಮಾರದಾಸ್ ತಂಡದವರು ಮತ್ತು ಕಲಬುರಗಿಯ ಕಲಾವಿದರು ಭಾಗವಹಿಸುವರು. ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕರಾದ ಬಿ ಶ್ರೀನಿವಾಸರಾವ ಐ.ಬಿ (ಇ.ಎಸ್ )ಆಕಾಶವಾಣಿ ನಿಲಯ ನಿರ್ದೇಶಕರಾದ ಅಂಜನಾ ಯಾತನೂರ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಾಜಿ ಸಚಿವರು ರಾಜ್ಯ ಬಸವ ಸಮಿತಿ ಉಪಾಧ್ಯಕ್ಷರಾದ ಡಾ ಲೀಲಾವತಿ ಆರ್ ಪ್ರಸಾದ ಅವರು ಅಧ್ಯಕ್ಷತೆ ವಹಿಸುವರು . ಪಂಡಿತ ಸಾತಲಿಂಗಪ್ಪ ದೇಸಾಯಿ ಕಲ್ಲೂರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವದು.
ಜ 14 ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಶ್ವೇತಾಪ್ರಭು ಮತ್ತು ತಂಡದವರು ಮತ್ತು ಕಲಬುರಗಿಯ ಎಂವೈ ಸುರಪುರ ,ಬಸವರಾಜ ಸಾಲಿ, ಶಾರದಾ ಜಂಬಲದಿನ್ನಿ ,ಸುಧಾರಾಣಿ ಮತ್ತಿತರರು ವಚನ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ವಚನ ಸಂಗೀತ ಕಲಿಯಲು ಆಸಕ್ತಿ ಇರುವವರಿಗಾಗಿ ವಚನ ಸಂಗೀತ ಶಾಲೆಯಲ್ಲಿ ವಾರಕ್ಕೆ ಎರಡು ದಿನಗಳ ತರಗತಿ ನಡೆಸಲಾಗುವದು. ಆಸಕ್ತರು ಉದ್ದಂಡಯ್ಯ ( 9591411676 ) ಅವರನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು
ಸುದ್ದಿಗೋಷ್ಠಿಯಲ್ಲಿ ಎಸ್ ಐ ಭಾವಿಕಟ್ಟಿ, ಟಿ ರುದ್ರಪ್ಪ, ಉದ್ದಂಡಯ್ಯ ಉಪಸ್ಥಿತರಿದ್ದರು

Leave a Comment