ವಕ್ಷ್ ಮಂಡಳಿಯ ಅಧ್ಯಕ್ಷರನ್ನಾಗಿ ಅಸೀಫ್ ಅಲಿಯವರನ್ನು ಆಯ್ಕೆ ಮಾಡಿ: ಬೆಳಗಲಿ

ಹುಬ್ಬಳ್ಳಿ,ಜೂ.20- ಕರ್ನಾಟಕ ರಾಜ್ಯದ ವಕ್ಪ್ ಮಂಡಳಿಯು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯವುಳ್ಳ ಸಂಸ್ಥೆಯಾಗಿದ್ದು, ಮಂಡಳಿಯ ಚುನಾಯಿತ ಸದಸ್ಯರ 6 ಜನರ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ.ರಾಜ್ಯ ಸರ್ಕಾರದ 4 ಜನರ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದ್ದು,  ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದ ಅಲ್ಪಸಂಖ್ಯಾತ ಅಭ್ಯರ್ಥಿ ಕೊಪ್ಪಳದ ಆಸಿಫ್ ಅಲಿ ಅಧ್ಯಕ್ಷ ಸ್ಥಾನಕ್ಕೆ  ಸ್ಪರ್ಧಿಸಲಿದ್ದಾರೆ.ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು  ಸಂಸ್ಥೆಯ ಉಪಾಧ್ಯಕ್ಷರಾದ ಐ.ಕೆ.‌ಬೆಳಗಲಿ ಮನವಿ ಮಾಡಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಚುನಾವಣೆ ಈಗಾಗಲೇ ಮುಕ್ತಾಯವಾಗಿದ್ದು, ರಾಜ್ಯ ಸರ್ಕಾರ ಅಧಿಸೂಚನೆಯನ್ನು  ಹೊರಡಿಸಲಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ನೇಮಕಾತಿ ವಿಚಾರದಲ್ಲಿ ಉ.ಕ. ಭಾಗವನ್ನು ಕಡೆಗಣಿಸುತ್ತಲೇ ಬಂದಿದೆ. ಈ ಬಾರಿಯಾದರೂ  ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.
ಕರ್ನಾಟಕ ವಕ್ಷ್  ಮಂಡಳಿ 40 ವರ್ಷಗಳಿಂದ ಅಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದ ಇಂದಿನವರೆಗೂ ಉತ್ತರ ಕರ್ನಾಟಕ ಭಾಗದ ಯಾರಿಗೂ ಸಹ ಅಧ್ಯಕ್ಷ ಸ್ಥಾನ ದೊರೆತಿಲ್ಲ. ಈ ಬಾರಿ ಕರ್ನಾಟಕ ವಕೀಲ‌ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಈ ಭಾಗದ ಆಸಿಫ್ ಅವರು ಸ್ವಂತ ಪರಿಶ್ರಮದಿಂದ ಗೆಲುವು ಸಾಧಿಸಿದ್ದಾರೆ. ಇವರು ಉತ್ತರ ಕರ್ನಾಟಕದ ಏಕೈಕ ಅಲ್ಪಸಂಖ್ಯಾತ ಅಭ್ಯರ್ಥಿಯೂ‌ ಸಹ ಆಗಿದ್ದಾರೆ ಎಂದು ಅವರು ಹೇಳಿದರು.
ಹೀಗಾಗಿ ರಾಜ್ಯ  ಸರ್ಕಾರ ಆಸಿಫ್ ಅಲಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ  ಆಯ್ಕೆ ಮಾಡಬೇಕೆಂದು ಎಂದು ಮನವಿ‌ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ  ಹಿರಿಯ ವಕೀಲರಾದ ಎಮ್.ಎಮ್.‌ಮೈಸೂರಿ,ಎಸ್.ಎಫ್.ರೇಶ್ಮಿ, ಎ.ಎ. ಕಮಾನಗಾರ,ಎಂ.ಎ. ಶಿವಳ್ಳಿ, ಎನ್.ಎಮ್.‌ಚುಲಬುಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment