ವಕೀಲರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ :ಮೋತಕಪಲ್ಲಿ

( ನಮ್ಮ ಪ್ರತಿನಿಧಿಯಿಂದ)

ಕಲಬುರಗಿ ಜು 12: ನಮ್ಮ ಭಾಗದ ಎಲ್ಲ ವಕೀಲರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರಕ್ಕೆ  ಪ್ರ್ರಾಮಾಣಿಕ ಪ್ರಯತ್ನ ಮಾಡುವದಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಗೆ ಎರಡನೆಯ ಬಾರಿಗೆ ಆಯ್ಕೆಯಾದ ಹಿರಿಯ ವಕೀಲರಾದ ಕಾಶಿನಾಥ ಮೋಕತಪಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲ ಆಶ್ವಾಸನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವದಾಗಿ ಹೇಳಿದ ಅವರು, ಬಿಸಿಐ ನಿಯಮಾವಳಿಗೆ ತಿದ್ದುಪಡಿ ತರುವ ಪ್ರಯತ್ನ ಮತ್ತು 371 (ಜೆ ) ಅಡಿ ಸರಕಾರದ ಅನುದಾನದೊಂದಿಗೆ ವಿಶೇಷ ನಿಧಿ ಸ್ಥಾಪಿಸಲು ಕ್ರಮ ಕೈಗೊಳ್ಳುವದಾಗಿ ಹೇಳಿದರು.

ಕಾನೂನು ಅಕಾಡೆಮಿ, ಕೆಎಟಿ ಸ್ಥಾಪನೆಗೆ ತೀವ್ರ ಪ್ರಯತ್ನ ನಡೆಸಲಾಗುವದು. ವಕೀಲರ ಕಲ್ಯಾಣ ನಿಧಿಯ ಪರಿಹಾರ ಮೊತ್ತ ಹೆಚ್ಚಿಸಿ ಎಲ್ಲರಿಗೂ ಸಮನಾದ ನಿಧಿ ಸಿಗುವಂತೆ ಮತ್ತು ನಿಧಿ ಸಂಗ್ರಹ ಕೇಂದ್ರವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ವಕೀಲರ ಭವನ:

ಕಲಬುರಗಿ ವಿಭಾಗದಲ್ಲಿ ವಕೀಲರ ಭವನ ನಿರ್ಮಿಸಲು ಮುಂದಾಗುವದಾಗಿ ಹೇಳಿದ ಅವರು, ಕಲಬುರಗಿ ಉಚ್ಚ ನ್ಯಾಯಾಲಯದ ವ್ಯಾಪ್ತಿಗೆ ಬಳ್ಳಾರಿ ಕೊಪ್ಪಳ ಜಿಲ್ಲೆಗಳನ್ನು ಸೇರಿಸಲು ಎಲ್ಲರ ಸಹಾಯ ಸಹಕಾರ ಕೋರುತ್ತೇನೆ ಎಂದರು

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಕಾಶಿನಾಥ ಮೋತಕಪಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸುವಂತೆ ಪರಿಷತ್ತಿನ ಸರ್ವ ಸದಸ್ಯರಿಗೆ  ನ್ಯಾಯವಾದಿ ವಿನೋದಕುಮಾರ ಜನವರಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಭೀಮಾಶಂಕರ ಬಿ ಅಷ್ಟಗಿ, ಮಾಲತಿ ರೇಷ್ಮಿ,  ಶಿವಲಿಂಗಪ್ಪ ಬಿರಜಿ ಉಪಸ್ಥಿತರಿದ್ದರು

Leave a Comment