ವಕೀಲರ ರಕ್ಷಣೆ ಕಾಯ್ದೆಗೆ ಒತ್ತಾಯಿಸಿ ಪ್ರತಿಭಟನೆ

ಬೆಂಗಳೂರು, ಫೆ.೧೨- ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತರಲು ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್ ಕರೆ ನೀಡಿ ರುವ ರಾಷ್ಟ್ರವ್ಯಾಪಿ ಪ್ರತಿಭಟನೆ ಬೆಂಬಲಿಸಿ ’ಕೋರ್ಟ್ ಕಲಾಪಗಳಿಂದ ಹೊರಬಂದು’ ವಕೀಲರು ಪ್ರತಿಭಟನೆ ನಡೆಸಿದರು.

ನಗರದಲ್ಲಿಂದು ಮೈಸೂರು ಬ್ಯಾಂಕ್ ವೃತ್ತದ ಸಿವಿಲ್ ಕೋರ್ಟ್ ಮುಂಭಾಗ ಬೆಂಗಳೂರು ವಕೀಲರ ಸಂಘ ನೇತೃತ್ವದಲ್ಲಿ ಜಮಾಯಿಸಿದ ವಕೀಲರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು.

ರಾಜ್ಯದಲ್ಲಿ ತಾಲ್ಲೂಕು ನ್ಯಾಯಾಲಯದಿಂದ ಹಿಡಿದು ಉಚ್ಚ ನ್ಯಾಯಾಲದವರೆಗೆ ಲಕ್ಷಾಂತರ ವಕೀಲರು ಬದುಕಿನ ಪ್ರತಿ ಕ್ಷಣದಲ್ಲೂ ತಮ್ಮ ಜೀವವನ್ನೂ ಲೆಕ್ಕಿಸದೇ ವೃತ್ತಿಯನ್ನು ಮಾಡುತ್ತಿದ್ದಾರೆ. ಅವರ ಮೇಲೆ,
ಸಾಕಷ್ಟು ಹಲ್ಲೆ ಕೊಲೆಗಳು ನಿರಂತರವಾಗಿ ಈ ಸಮೂಹ ಎದುರಿಸಿಕೊಂಡೇ ಮುಂದುವರೆಯುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ವಕೀಲರು ಹೇಳಿದರು.

ಕಾನೂನನ್ನು ಕಾಪಾಡುವ ಶ್ರೇಷ್ಠ ವೃತ್ತಿ ಎಂದು ಭಾವಿಸಿ ವಕೀಲಿಕೆ ಮಾಡುತ್ತಿರುವ ಈ ಸಮೂಹ ಸಾಕಷ್ಟು ದಿನಗಳಿಂದ ಅನೇಕ ಬೇಡಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದೆ ಇಟ್ಟಿತ್ತು.

ವಕೀಲಿಕೆ ಮಾಡಲು ಪದವಿ ಮುಗಿಸಿ ನೊಂದಣಿ ಮಾಡಿಕೊಂಡ ಹೊಸಬರಿಗೆ ಹೆಚ್ಚಿನ ಸಹಾಯಧನ, ವಕೀಲರ ಮೇಲೆ ನಡೆಯುವ ಹಲ್ಲೆ ಕೊಲೆಗಳಿಗೆ ಪರಿಹಾರ ಮಾರ್ಗೋಪಾಯಗಳು, ವಕೀಲರ ಸಂಘಗಳಿಗೆ ಕನಿಷ್ಟ ಸರ್ಕಾರಿ ಸೌಲಭ್ಯಗಳು, ವಕೀಲರ ಕಲ್ಯಾಣ ನಿಧಿ ಹೆಚ್ಚಿಸುವುದು, ರಾಜ್ಯ ವಕೀಲರ ಪರಿಷತ್ತಿಗೆ ಸಹಾಯಧನ ಮಂತಾದ ಕೆಲವು ಬೇಡಿಕೆಗಳ ಕೂಗು ಹೆಚ್ಚುತ್ತಲೇ ಇದೆ.

ಆದರೆ, ಸರ್ಕಾರ ಮಂಡಿಸಿದ ಬಡ್ಜೆಟ್ನಲ್ಲಿ ವಕೀಲರ ಕುರಿತಾಗಿ ಒಂದು ಮಾತು ಸಹ ನುಡಿದಂತೆ ಕಾಣುತ್ತಿಲ್ಲ. ಹಾಗೂ ಈ ವಾರ್ಷಿಕ ಬಜೆಟ್ ನ ಪ್ರತಿಯಲ್ಲೂ ವಕೀಲನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಹೀಗಾಗಿ, ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಸೇರಿದಂತೆ ಹಿರಿಯ ವಕೀಲರು ಪಾಲ್ಗೊಂಡಿದ್ದರು.

ನಮಗೂ ರಕ್ಷಣೆ ಅಗತ್ಯ

ವಕೀಲರ ಮೇಲೆ ಪೋಲಿಸ್ ದೌರ್ಜನ್ಯ ಪ್ರಕರಣ. ನಿರಂತರವಾಗಿ ದೌರ್ಜನ್ಯ, ಹಲ್ಲೆ, ಸುಳ್ಳು ಪ್ರಕರಣ ದಾಖಲು ಮಾಡಿ ಬಂಧನ ಮಾಡಲಾಗುತ್ತಿದೆ.ಹೀಗಾಗಿ, ನಮಗೂ
ವಕೀಲರ ರಕ್ಷಣಾ ಕಾನೂನು ರೂಪಿಸಬೇಕು.

– ಅನಂತ್ ನಾಯ್ಕ್, ಯುವ ವಕೀಲ

Leave a Comment