ವಕೀಲರಿಗಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ಬಿಡುಗಡೆಗೆ ಕಾಮರೆಡ್ಡಿ ಆಗ್ರಹ

ಧಾರವಾಡ ಮೇ.25-ಕೊರೊನಾ ಮಹಾಮಾರಿಯ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರಕಾರಗಳು ಮತ್ತು ಸುಪ್ರೀಂ ಕೋರ್ಟ ಹಾಗೂ ಹೈಕೋರ್ಟ್ ಆದೇಶಗಳನ್ವ ಲಾಕ್‌‌ಡೌನ ಜಾರಿಯ ಪರಿಣಾಮವಾಗಿ ಮಾರ್ಚ ಮೂರನೇ ವಾರದಿಂದಲೇ ರಾಜ್ಯದ ಎಲ್ಲಾ ನ್ಯಾಯಾಲಯಗಳು ಕಲಾಪಗಳು ಸ್ಥಗಿತಗೊಂಡಿವೆ. ಕೇವಲ ತುರ್ತು ಪ್ರಕರಣಗಳನ್ನು ಮಾತ್ರ ಕೆಲ ನ್ಯಾಯಾಲಯಗಳು ವಿಚಾರಣೆ ನಡೆಸುತ್ತೀವೆ. ನ್ಯಾಯಾಲಯಗಳು ಕಲಾಪಗಳನ್ನು ನಿಲ್ಲಿಸಿವುದರಿಂದ ವಕೀಲರಿಗೆ ದಿನನಿತ್ಯದ ದುಡಿಮೆ ಮತ್ತು ಆದಾಯ ನಿಂತು ವಕೀಲರು ಆರ್ಥಿಕ ಸಂಕಷ್ಟ ಎದುರಿಸುತ್ತೀದ್ದಾರೆ.
ಕರ್ನಾಟಕದಲ್ಲಿ ಒಂದು ಲಕ್ಷಕ್ಕು ಹೆಚ್ಚು ವಕೀಲರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಣಿ ಮಾಡಿಕೊಂಡಿದ್ದು ಅದರಲ್ಲಿ ಶೇಕಡಾ 80 % ರಷ್ಟು ವಕೀಲರು ಯುವ ವಕೀಲರೆ ಇರುತ್ತಾರೆ ಹಲವು ವಕೀಲರು ಬಾಡಿಗೆ ಮನೆ ಮತ್ತು ಕಛೇರಿ ನಡೆಸಲು ಬಾಡಿಗೆ ಕಟ್ಟಡ ಮತ್ತು ಮಳಿಗೆಗಳನ್ನು ಪಡೆದಿರುತ್ತಾರೆ ಈ ಲಾಕ್ ಡೌನ ಅವಧಿಯಲ್ಲಿ ಆದಾಯ ನಿಂತು ಹೋಗಿರುವದರಿಂದ ಕುಟುಂಬ ನಿರ್ವಹಣೆ ಮಾಡಲು ಮತ್ತು ಮನೆ ಮತ್ತು ಕಛೇರಿ ಬಾಡಿಗೆ ಸಂಧಾಯ ಮಾಡಲು ತೀವ್ರವಾದ ಕಷ್ಟ ಎದುರಿಸುತ್ತಿದ್ದಾರೆ.
ಈ ಹಿಂದೆ ಹಲವಾರು ಬಾರಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಹಲವಾರಿ ಜಿಲ್ಲಾ ಮತ್ತು ತಾಲೂಕಾ ವಕೀಲರ ಸಂಘಗಳು ಸರಕಾರಗಳಿಗೆ ಮನವಿ ಸಲ್ಲಿಸಿ ಬಜೆಟ್ ನಲ್ಲಿ ವಕೀಲರಿಗೆ ಪ್ರತ್ತೇಕ ಅನುಧಾನ ನೀಡಲು ಮತ್ತು ವಿಶೇಷ ಆರ್ಥಿಕ ಪ್ಯಾಕೇಜ್ ಬೀಡುಗಡೆ ಮಾಡಲು ಆಗ್ರಹಿಸಲಾಗಿತ್ತು. ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತೀರುವ ವಕೀಲರ ಹಿತಾಸಕ್ತಿ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದುವರೆಗು ಯಾವುದೇ ರೀತಿಯ ಅನುಧಾನವನ್ನಾಗಲಿ ಅಥವಾ ವಕೀಲರಿಗಾಗಿ ವಿಶೇಷ ಆರ್ಥಿಕ ಪ್ಯಾಕೇಜುಗಳನ್ನಾಗಲಿ ಘೋಷಣೆ ಮಾಡದೆ ವಕೀಲರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿವೆ. ವಕೀಲರಿಂದ ಮತ ಪಡೆದು ಆಯ್ಕೆಯಾದ ಜನ ಪ್ರತಿನಿಧಿಗಳು ಕೂಡಾ ವಕೀಲರ ಸಂಕಷ್ಟಗಳಿಗೆ ಸ್ಪಂಧಿಸದೆ ನಿರ್ಲಕ್ಷದೋರಣೆ ಅನುಸರಿಸುತ್ತಿದ್ದಾರೆ. ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯವಾದ ಅನುಧಾನ ಮತ್ತು ತೊಂದರೆಗೋಳಗಾದ ವಕೀಲರಿಗೆ ಸಹಾಯ ಮಾಡಲು 100 ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜನ್ನು ಘೋಷಣೆಮಾಡಿ ಹಣ ಬೀಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ವಿ.ಡಿ ಕಾಮರೆಡ್ಡಿ ಆಗ್ರಹಸಿದ್ದಾರೆ.

Share

Leave a Comment