ವಂಚನೆ, ಜೀವ ಬೆದರಿಕೆ ಪ್ರಕರಣ : ರಾಮದಾಸ್ ಗೆ ಸಮನ್ಸ್

ಬೆಂಗಳೂರು.ಅ.21. 2014ರಲ್ಲಿ ಮಾಜಿ ಸಚಿವ ಎಸ್ ಎ ರಾಮದಾಸ್ ವಿರುದ್ಧ ಪ್ರೇಮಕುಮಾರಿ ಎಂಬುವರು ಸಲ್ಲಿಸಲಾಗಿದ್ದ ವಂಚನೆ, ಜೀವಬೆದರಿಕೆ ದೂರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಸ್ ಎ ರಾಮದಾಸ್ ಗೆ ಸಮನ್ಸ್ ನೀಡಿದೆ.
ಮಾಜಿ ಸಚಿವ ಎಸ್ ಎ ರಾಮದಾಸ್ ಗೆ ಇದೀಗ ಸಂಕಷ್ಟ ಎದುರಾಗಿದೆ. 2014ರಲ್ಲಿ ಎಸ್ ಎಸ್ ರಾಮದಾಸ್ ಅವರು ವಂಚನೆ, ಜೀವಬೆದರಿಕೆ ಹಾಕಿದ್ದರೆ ಎಂಬ ಪ್ರಕರಣ ಸಂಬಂಧ ದೂರು ಸಲ್ಲಿಸಿದ್ದರು. ಈ ಪ್ರಕರಣ ಸಂಬಂಧ ನ್ಯಾಯಾಲಯ ಮೆಟ್ಟಿಲೇರಿದ್ದರು. ಇಂತಹ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ಬಗ್ಗೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಈ ಕುರಿತಂತೆ ಇಂದು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಪ್ರಕರಣ ಸಂಬಂಧ ನವೆಂಬರ್ 25ಕ್ಕೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಈ ಮೂಲಕ ಮಾಜಿ ಸಚಿವ ಎಸ್ ರಾಮದಾಸ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.

Leave a Comment