ಲ್ಯಾಕ್ಮೆ ಫ್ಯಾಶನ್ ವೀಕ್ ಆಡಿಷನ್ ಯಶಸ್ವಿ

ನಗರದ ಅಕ್ಷತಾ, ಲೂಧಿಯಾನಾದ ಕಿರಣ್‌ದೀಪ್ ಆಯ್ಕೆ

ನಗರದಲ್ಲಿ ಇತ್ತೀಚೆಗೆ ನಡೆದ ಲ್ಯಾಕ್ಮೆ ಫ್ಯಾಶನ್ ವೀಕ್‌ನ ಆಡಿಷನ್‌ನಲ್ಲಿ ರೂಪದರ್ಶಿಗಳಾದ ಕ್ಯಾಲಂ ಬುಚನ್ ಮತ್ತು ಲೂಯಿಸ್ ಡೊಮಿಂಗೋ ಹಾಗೂ ಸ್ಯಾಂಡಲ್‌ವುಡ್ ನಟಿ ಐಂದ್ರಿತಾ ರೇ ಮತ್ತಿತರರು ರ್‍ಯಾಂಪ್ ವಾಕ್ ಮಾಡುವ ಮೂಲಕ ಸ್ಫರ್ಧಿಗಳಿಗೆ ಸ್ಫೂರ್ತಿ ತುಂಬಿದರು.

ಜಗತ್ತಿನ ಹೆಸರಾಂತ ಸೌಂದರ್ಯವರ್ಧಕ ತಯಾರಿಕಾ ಸಂಸ್ಥೆಯಾಗಿರುವ ಲ್ಯಾಕ್ಮೆ ತನ್ನ ಭಾರತದ ಅತ್ಯಂತ ಜನಪ್ರಿಯ ಲ್ಯಾಕ್ಮೆ ಫ್ಯಾಶನ್ ವೀಕ್‌ನ ವಿಂಟರ್/ಫೆಸ್ಟಿವ್ ೨೦೧೯ ರ ಸರಣಿಗೆ ರೂಪದರ್ಶಿಗಳ ಆಡಿಶನ್ ಅನ್ನು ಇತ್ತೀಚೆಗೆ ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ಆಯೋಜಿಸಿತ್ತು. ಸ್ಫರ್ಧೆ ಕೊನೆಯಲ್ಲಿ ಉದ್ಯಾನನಗರಿಯಿಂದ ಅಕ್ಷತ ಹಾಗೂ ಲೂದಿಯಾನದಿಂದ ಕಿರಣ್‌ದೀಪ್ ಅವರು ತೀರ್ಪುಗಾರರ ಮನಗೆಲ್ಲುವಲ್ಲಿ ಯಶಸ್ವಿಯಾದರು.

ಫ್ಯಾಶನ್ ಉದ್ಯಮದಲ್ಲಿನ ಪರಿಣತರನ್ನೊಳಗೊಂಡ ವಿಶೇಷ ತೀರ್ಪುಗಾರರ ಮಂಡಳಿಯು ಈ ಇಬ್ಬರು ಸುಂದರಿಯನ್ನು ಆಯ್ಕೆ ಮಾಡಿತ್ತು. ಈ ವಿಜೇತೆ ಲ್ಯಾಕ್ಮೆ ಫ್ಯಾಶನ್ ವೀಕ್‌ನ ವಿಂಟರ್/ಫೆಸ್ಟಿವ್ ೨೦೧೯ ರ ಸರಣಿಯ ರ್‍ಯಾಂಪ್ ಮೇಲೆ ಮೊದಲ ಬಾರಿಗೆ ಹೆಜ್ಜೆ ಹಾಕಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತನಾಮ ಮಾಡೆಲಿಂಗ್ ಏಜೆನ್ಸಿಗಳಲ್ಲಿ ಒಂದಾಗಿರುವ ಐಎಂಜಿ ಮಾಡೆಲ್ಸ್ ಸಂಸ್ಥೆಯು ಈ ಪ್ರತಿಭಾನ್ವಿತ ಮಾಡೆಲ್‌ಗಳ ಅನ್ವೇಷಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿತು. ಈ ಸಂಸ್ಥೆ ದೇಶದ ಪ್ರಮುಖ ಮೂರು ನಗರಗಳಾದ ಬೆಂಗಳೂರು, ಜೈಪುರ ಮತ್ತು ಗುವಾಹತಿಯಲ್ಲಿ ಈ ಆಡಿಶನ್ ಅನ್ನು ನಡೆಸುತ್ತಿದೆ.
ಈ ಮೂರು ನಗರಗಳಲ್ಲಿನ ವಿಜೇತರಿಗೆ ಅಂತಾರಾಷ್ಟ್ರೀಯ ರ್‍ಯಾಂಪ್ ಮೇಲೆ ಹೆಜ್ಜೆ ಹಾಕುವ ಮತ್ತು ಐಎಂಜಿ ಯೂರೋಪ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ ದೊರೆಯಲಿದೆ. ಇದಲ್ಲದೇ ಒಬ್ಬರು ಅದೃಷ್ಠಶಾಲಿ ವಿಜೇತೆ ಲ್ಯಾಕ್ಮೆಯ ಡಿಜಿಟಲ್ ಕಂಟೆಂಟ್‌ನಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ಲಭ್ಯವಾಗಲಿದೆ.

ಐಎಂಜಿ ಮಾಡೆಲ್‌ಗಳಾದ ಕ್ಯಾಲಂ ಬುಚನ್ ಮತ್ತು ಲೂಯಿಸ್ ಡೊಮಿಂಗೋ, ದಕ್ಷಿಣ ಭಾರತದ ಹೆಸರಾಂತ ನಟಿ ಐಂದ್ರಿತಾ ರೇ, ಖ್ಯಾತ ಫ್ಯಾಶನ್ ಡಿಸೈನರ್ ನಿಖಿಲ್ ಥಂಪಿ, ಫ್ಯಾಶನ್ ಕೊರಿಯೋಗ್ರಾಫರ್ ಮತ್ತು ಶೋ ಡೈರೆಕ್ಟರ್ ವಹ್ಬಿಝ್ ಮೆಹ್ತಾ, ಲ್ಯಾಕ್ಮೆಯ ಇನ್ನೋವೇಶನ್ಸ್ ಮುಖ್ಯಸ್ಥ ಅಶ್ವಥ್ ಸ್ವಾಮಿನಾಥನ್ ಮತ್ತು ಐಎಂಜಿ ರಿಲಾಯನ್ಸ್‌ನ ಡಿಸೈನರ್ ರಿಲೇಶನ್ಸ್‌ನ ಮುಖ್ಯಸ್ಥೆ ನಿಖಿತಾ ಪೂಂಜಾ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ನಟಿ ಐಂದ್ರಿತಾ ರೇ ಅವರು ಮಾತನಾಡಿ, ಲ್ಯಾಕ್ಮೆ ಫ್ಯಾಶನ್ ವೀಕ್‌ನ ಬೆಂಗಳೂರು ಮಾಡೆಲ್ ಆಡಿಶನ್‌ಗಳಲ್ಲಿ ತೀರ್ಪುಗಾರರ ಮಂಡಳಿಯಲ್ಲಿನ ನಾನು ಭಾಗಿಯಾಗಿರುವುದಕ್ಕೆ ನನಗೆ ಸಂತೋಷವೆನಿಸಿದೆ. ಇಲ್ಲಿ ಗೆಲುವು ಸಾಧಿಸಿರುವ ಹುಡುಗಿಯರು ತಮ್ಮದೇ ಆದ ಮಾರ್ಗದಲ್ಲಿ ತೀರ್ಪುಗಾರರ ಗಮನವನ್ನು ಸೆಳೆದಿದ್ದಾರೆ ಎಂದರು.

ಲ್ಯಾಕ್ಮೆಯ ಇನ್ನೋವೇಶನ್ಸ್‌ನ ಮುಖ್ಯಸ್ಥರಾದ ಅಶ್ವಥ್ ಸ್ವಾಮಿನಾಥನ್ ಅವರು ಮಾತನಾಡಿ, ಈ ನಗರಗಳಲ್ಲಿನ ಪ್ರತಿಭಾನ್ವಿತರನ್ನು ನೋಡಲು ನಮಗೆ ಅತೀವ ಸಂತಸವಾಗುತ್ತಿದೆ. ಅವರು ತಮ್ಮ ಮಾಡೆಲಿಂಗ್ ವೃತ್ತಿಯನ್ನು ಅನಾವರಣ ಮಾಡಲು ಲ್ಯಾಕ್ಮೆ ವೇದಿಕೆಯನ್ನು ಒದಗಿಸಿಕೊಟ್ಟಿದೆ. ನಮಗೆ ರ್‍ಯಾಂಪ್ ಮೇಲೆ ಈ ಹೊಸ ಮುಖಗಳು ಹೆಜ್ಜೆ ಹಾಕುವುದನ್ನು ನೋಡಿದಾಗ ಸಂತೋಷವೆನಿಸಿತು. ಇದರಲ್ಲಿ ಒಬ್ಬ ಅದೃಷ್ಠಶಾಲಿಗೆ ಲ್ಯಾಕ್ಮೆ ಡಿಜಿಟಲ್ ಕಂಟೆಂಟ್‌ನಲ್ಲಿ ನಟಿಸಲು ಉತ್ತಮ ಅವಕಾಶ ಲಭಿಸಲಿದೆ ಎಂದರು.

ಐಎಂಜಿ ರಿಲಾಯನ್ಸ್‌ನ ಡಿಸೈನರ್ ರಿಲೇಶನ್ಸ್‌ನ ಮುಖ್ಯಸ್ಥೆ ನಿಖಿತಾ ಪೂಂಜಾ ಅವರು ಮಾತನಾಡಿ, “ನಾವು ಪ್ರತಿ ಸೀಸನ್‌ನಲ್ಲಿ ದೇಶದ ಮೂಲೆ ಮೂಲೆಗಳ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡುತ್ತೇವೆ. ಮುಂಬರುವ ಎಲ್‌ಎಫ್‌ಡಬ್ಲ್ಯೂ ಸೀಸನ್‌ನಲ್ಲಿ ಈ ಹೊಸ ಮುಖಗಳ ಪಾದಾರ್ಪಣೆಯನ್ನು ಮತ್ತು ಫ್ಯಾಶನ್ ಉದ್ಯಮದಲ್ಲಿನ ಪಯಣ ಆರಂಭಿಸುವುದನ್ನು ನೋಡಲು ನಾವು ಕಾತುರರಾಗಿದ್ದೇವೆ ಎಂದು ಹೇಳಿದರು. ಮುಂಬೈನ ಸೇಂಟ್ ರೆಗಿಸ್‌ನಲ್ಲಿ ಆಗಸ್ಟ್ ೨೧ ರಿಂದ ೨೫ ರವರೆಗೆ ಲ್ಯಾಕ್ಮೆ ಫ್ಯಾಶನ್ ವೀಕ್ ವಿಂಟರ್/ಫೆಸ್ಟಿವ್ ೨೦೧೯ ನಡೆಯಲಿದೆ.

Leave a Comment