ಲೋಹದ ತಟ್ಟೆಯಲ್ಲಿ ಆಹಾರ ತಿಂದರೆ ಆಗುವುದಿಲ್ಲ ಅನಾರೋಗ್ಯ

ಲೋಹಗಳಿಗೂ ಮನುಷ್ಯರಿಗೂ ಅವಿನಾಭಾವ ಸಂಬಂಧ ಅದರಲ್ಲೂ ಬೆಳ್ಳಿ, ಬಂಗಾರ, ಹಿತ್ತಾಳೆ, ತಾಮ್ರ, ಕಂಚು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಲೋಹದ ಮಹತ್ವ ತಿಳಿದಿದ್ದ ನಮ್ಮ ಪೂರ್ವಜರು ಆಹಾರಗಳನ್ನು ಸಂಗ್ರಹಿಸಿಡಲು, ಆಹಾರ ತಿನ್ನಲು ಲೋಹದ ಪಾತ್ರೆ ಹಾಗೂ ಲೋಟಗಳನ್ನು ಬಳಸುತ್ತಿದ್ದರು.
ರಾಜಮಹಾರಾಜರು, ಧನಿಕರು ಊಟಕ್ಕೆ ಬಂಗಾರ, ಬೆಳ್ಳಿ ಪಾತ್ರೆ ಬಳಸುತ್ತಿದ್ದರೇ, ಸಾಮಾನ್ಯ ಜನ ಹಿತ್ತಾಳೆ, ತಾಮ್ರ ಹಾಗೂ ಕಂಚಿನ ಪಾತ್ರೆಗಳನ್ನು ಬಳಸುತ್ತಿದ್ದರು. ಈ ಲೋಹದ ಪಾತ್ರೆಗಳನ್ನು ಬಳಸಿ ಆಹಾರ ತಿಂದರೆ ಹಲವು ರೋಗಗಳಿಂದ ಮುಕ್ತರಾಗುವ ಜೊತೆಗೆ ಹಲವು ರೋಗಗಳು ಬಾರದಂತೆ ಎಚ್ಚರಿಕೆ ವಹಿಸಬಹುದಾಗಿದೆ. ಈ ಲೋಹದ ತಟ್ಟೆಗಳಲ್ಲಿ ಊಟ ಮಾಡಿದರೆ, ಲೋಟದಲ್ಲಿ ನೀರು ಕುಡಿದರೆ, ಅದರಿಂದ ದೇಹಕ್ಕೆ ಹೆಚ್ಚಿನ ಲಾಭಗಳು ಆಗುತ್ತವೆ.
ತಾಮ್ರ ಬಹುಬಳಕೆಯಲ್ಲಿ ಲೋಹ. ಹಿಂದಿನ ಕಾಲದಲ್ಲಿ ಕುಡಿಯುವ ನೀರನ್ನು ತಾಮ್ರದ ಪಾತ್ರೆಯ ಸಂಗ್ರಹಿಸಿಯಿಡುವುದನ್ನು ನಾವು ನೋಡಿದ್ದೇವೆ. ಇದರಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳಿವೆ. ಆರೋಗ್ಯವು ಸುಧಾರಿಸುತ್ತದೆ.
ತಾಮ್ರವು ಬ್ಯಾಕ್ಟೀರಿಯಾ ವಿರೋಧಿ ಲೋಹವಾಗಿದೆ. ಒಂದು ವರದಿಯ ಪ್ರಕಾರ ಸುಮಾರು ೧೬ ಗಂಟೆಗಳ ಕಾಲ ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿಟ್ಟರೆ ಆ ನೀರಿನಲ್ಲಿ ಹಾನಿಕಾರಿಕ ಸೂಕ್ಷ್ಮಜೀವಿಗಳು ನಾಶವಾಗುವುದನ್ನು ನೀರು ಶುದ್ಧವಾಗುತ್ತದೆ. ಆ ಕಾರಣದಿಂದ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಯಿಟ್ಟ ನೀರು ಕುಡಿಯುವುದು ಒಳ್ಳೆಯದು. ಇದರ ಜೊತೆಗೆ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಯಿಟ್ಟ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ರಕ್ತಶುದ್ಧಿಯಾಗುತ್ತದೆ. ಮೆದುಳಿನ ಕಾರ್ಯ ಚುರುಕಾಗುತ್ತದೆ. ಜೊತೆಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಜೀವಕಣಗಳು ಇದರಿಂದ ಲಭ್ಯವಾಗುತ್ತದೆ.
ತಾಮ್ರದ ಪಾತ್ರಯನ್ನು ಸಂಗ್ರಹಿಸಿಯಿಟ್ಟ ನೀರನ್ನು ಕುಡಿದರೆ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಆರೋಗ್ಯ ಸುಧಾರಣೆಗೆ ಬೆಳ್ಳಿ ಪಾತ್ರೆಯ ಬಳಕೆಯು ಒಳ್ಳೆಯದು. ಬೆಳ್ಳಿ ಪಾತ್ರೆಗಳಲ್ಲಿ ಸೂಕ್ಷ್ಮಾಣುಗಳನ್ನು ಕೊಲ್ಲುವ ಗುಣಗಳು ಇವೆ. ಹಾಗಾಗಿಯೇ ಸಣ್ಣ ಮಕ್ಕಳನ್ನು ಸೋಂಕುಗಳಿಂದ ರಕ್ಷಿಸಲು ಬೆಳ್ಳಿ ತಟ್ಟೆ, ಲೋಟ ಮತ್ತು ಚಮಚಗಳನ್ನು ಬಳಸಿ, ಆಹಾರ ತಿನ್ನುವ ಕ್ರಮವನ್ನು ಹಿಂದಿನಿಂದಲೂ ರೂಢಿಸಿಕೊಂಡು ಬರಲಾಗಿದೆ.
ಬೆಳ್ಳಿ ತಟ್ಟೆಯಲ್ಲಿ ಆಹಾರ ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶೀತ, ಜ್ವರ, ಇತ್ಯಾದಿಗಳನ್ನು ತಡೆಯಬಹುದು. ಜೊತೆಗೆ ಚರ್ಮ ಆರೋಗ್ಯ ರಕ್ಷಣೆಗೂ ಸಾಧ್ಯ.ಕಂಚಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರಗಳನ್ನು ತಿನ್ನುವುದರಿಂದ ಹಲವಾರು ಲಾಭಗಳಿವೆ. ಆದರೆ ಕಂಚಿನ ಪಾತ್ರೆಗೆ ಸರಿಯಾಗಿ ಕಲಾಯಿ ಮಾಡಿರಬೇಕು. ಹಳೆಯ ಕಂಚಿನ ಪಾತ್ರೆಗಳನ್ನು ಬಳಸಬಾರದು. ಇದು ಹಾನಿಕಾರಿಕ.ಕಂಚಿನ ಪಾತ್ರೆಗಳಲ್ಲಿ ದೀರ್ಘಕಾಲ ಆಹಾರ ಸಂಗ್ರಹಿಸಿಡಬಾರದು. ಕಂಚಿನ ಪಾತ್ರೆಗಳಲ್ಲಿ ಇರುವ ಆಹಾರಗಳನ್ನು ಇರುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ, ರಕ್ತ ಶುದ್ಧಿಯಾಗುತ್ತದೆ.
ಬಂಗಾರ ಎಲ್ಲರ ಹೆಚ್ಚಿನ ಲೋಹ. ಬಂಗಾರದ ಮೋಹಕ್ಕೆ ಬೀಳದವರೇ ವಿರಳ. ಈ ಬಂಗಾರ ತಟ್ಟೆಯಲ್ಲಿ ಊಟ ಮಾಡುವುದರಿಂದ, ನೀರು ಕುಡಿಯುವುದರಿಂದ ದೊಡ್ಡ ಲಾಭವಿದೆ. ಆದರೆ ಶ್ರೀಮಂತರು ಮಾತ್ರ ಬಂಗಾರದ ತಟ್ಟೆಗಳನ್ನು ಮಾತ್ರ ಬಳಸಲು ಸಾಧ್ಯ. ಬಂಗಾರದ ತಟ್ಟೆ, ಲೋಟಗಳಲ್ಲಿ ಆಹಾರ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ. ವಾತ, ಪಿತ್ತ, ಕಫ, ಮೂರು ದೋಷಗಳು ಕಡಿಮೆಯಾಗುತ್ತದೆ. ಈಗ ಬಂಗಾರದ ಲೋಹದಲ್ಲಿ ಮಾಡಿದ ಪಾತ್ರೆಗಳಲ್ಲಿನ ಆಹಾರ ಸೇವನೆ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ.
ಸ್ಟೈನ್‌ಲೆಸ್ ಸ್ಟೀಲ್ ಒಳ್ಳೆಯದಲ್ಲ
ಇಂದಿನ ದಿನ ಮಾನಗಳಲ್ಲಿ ಅಡುಗೆಗೆ ಮತ್ತು ಆಹಾರ ತಿನ್ನಲು ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸುತ್ತಾರೆ. ಇದು ದೇಹಕ್ಕೆ ಅಷ್ಟೇನು ಒಳ್ಳೆಯದಲ್ಲ. ಹಾಗಾಗಿ ಒಳ್ಳೆಯ ಗುಣಮಟ್ಟದ ಪಾತ್ರೆಗಳನ್ನು ಆಹಾರ ತಯಾರಿಸಲು ಬಳಸುವುದು ಒಳ್ಳೆಯದು.
ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ತಯಾರಿಕೆ ತುಂಬಾ ಒಳ್ಳೆಯದು. ಯಾಕೆಂದರೆ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡಿದ ಸಂದರ್ಭದಲ್ಲಿ ನೈಸರ್ಗಿಕವಾಗಿ ಕೆಲವು ಪೌಷ್ಠಿಕಾಂಶಗಳು ಆಹಾರ ಸೇರುತ್ತದೆ. ಈ ಪೌಷ್ಠಿಕಾಂಶಗಳು ದೇಹದ ಆರೋಗ್ಯವನ್ನು ಕಾಪಾಡುತ್ತದೆ.

Leave a Comment