ಲೋಕಾ ಚುನಾವಣೆ, ಪುರುಷರ ಮತದಾನ ಹೆಚ್ಚು: ಡಿಸಿ ರಾಮ್ ಪ್ರಸಾತ್

ಬಳ್ಳಾರಿ, ಏ.25: ಬಳ್ಳಾರಿ ಲೋಕಸಭಾ ಕ್ಷೇತ್ರದ 8 ವಿಧಾನ ಸಭಾ ಕ್ಷೇತ್ರಗಳ ಒಟ್ಟು 1751297 ಮತದಾರರ ಪೈಕಿ 1218767 ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದು, ಶೇ.69.50 ರಷ್ಟು ಮತದಾನ ನಡೆದಿದೆ. ಈ ಪೈಕಿ ಮಹಿಳೆಯರಿಗಿಂತ ಪುರಷರ ಮತದಾನವೇ ಹೆಚ್ಚಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 621828 ಪುರುಷ ಮತದಾರರು, 596924 ಮಹಿಳಾ ಮತದಾರರು ಮತ ಚಲಾಯಿಸಿದ್ದು, ಈ ಪೈಕಿ ಈ ಲೋಕಸಭಾ ಕ್ಷೇತ್ರದಲ್ಲಿ ಪುರುಷರೇ ಹಚ್ಚು ಮತ ಚಲಾವಣೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ನಡೆಸಿದಿರುವುದು ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಶೇ.73.37 ರಷ್ಟು ನಡೆದಿದೆ. ಅತೀ ಕಡಿಮೆ ಮತದಾನ ನಡೆದಿರುವುದು ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರ ಶೇ.63.05 ರಷ್ಟ ಮತದಾನ ನಡೆದಿದೆ ಎಂದು ಹೇಳಿದರು.

ಹಗರಿಬಿಬೊಮ್ಮನಹಳ್ಳಿಯ ಮತಗಟ್ಟೆ ಸಂಖ್ಯೆ 154 ರಲ್ಲಿ ಶೇ.90.23 ರಷ್ಟ ಹೆಚ್ಚು ಮತದಾನ ನಡೆದಿದೆ. ಅತೀ ಕಡಿಮೆ ಮತದಾನ ಹಗರಿಬೊಮ್ಮನಹಳ್ಳಿಯ ಮತಗಟ್ಟೆ ಸಂಖ್ಯೆ 09 ರಲ್ಲಿ ಶೇ.00.56 ರಷ್ಟು ನಡೆದಿದೆ. ಒಟ್ಟು 112 ಮತಗಟ್ಟೆ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗಿತ್ತು ಎಂದು ಅವರು ತಿಳಿಸಿದರು.

6317 ಸರಕಾರಿ ಸಿಬ್ಬಂದಿಗೆ ಅಂಚೆ ಮತ ಪತ್ರಗಳನ್ನು ನೀಡಲಾಗಿದೆ. ಈ ಪೈಕಿ 852 ಮತಗಳು ಮಾತ್ರ ಬಂದಿವೆ. ಮೇ.23 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಇದಕ್ಕೆ ಎಂಟು ಗಂಟೆ ಮುಂಚಿತವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 27,9,540 ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಒಟ್ಟು 1,96,8,100 ಮೌಲ್ಯದ 991 ಕೇಸ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಾಲ್ಕು ಜನ ಸಿಬ್ಬಂದಿ ಮೃತ ಮೃತ ಪಟ್ಟಿದ್ದು, ಅನುಕಂಪದ ಆಧಾರದ ಮೇಲೆ ಮೃತರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಾಗುವುದು ಎಂದಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಲಕ್ಷ್ಮಣ್ ನಿಂಬರಗಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ನಂದಿನಿ ಅವರು ಹಾಜರಿದ್ದರು.

Leave a Comment