ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಅಧಿರ್ ರಂಜನ್ ಚೌಧರಿ ಆಯ್ಕೆ

ನವದೆಹಲಿ, ಜೂನ್ 18- ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ನಾಯಕರಾಗಿ ಪಶ್ಚಿಮ ಬಂಗಾಳದ ಸಂಸದ ಅಧಿರ್ ರಂಜನ್ ಚೌಧರಿ ನೇಮಕಗೊಂಡಿದ್ದಾರೆ.

ಮಂಗಳವಾರ  ಮುಂಜಾನೆ ನಡೆದ ಕಾಂಗ್ರೆಸ್ ಸಂಸದರ ಸುದೀರ್ಘ  ಸಭೆಯಲ್ಲಿ ಪಶ್ಚಿಮ ಬಂಗಾಳದ ಬೇರ್ಹಂಪುರ  ಲೋಕಸಭಾ ಕ್ಷೇತ್ರದ ಸದಸ್ಯ ಚೌಧರಿ ಅವರನ್ನು ನೇಮಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ರಾಹುಲ್ ಗಾಂಧಿ ಅವರು ಲೋಕಸಭಾ ಕಾಂಗ್ರೆಸ್ ನಾಯಕನ ಸ್ಥಾನದಲ್ಲಿ  ಮುಂದುವರಿಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಚೌಧರಿ ಹೆಸರನ್ನು ಅಂತಿಮಗೊಳಿಸಲಾಯಿತು  ಎಂದು ಪಕ್ಷದ ಮೂಲಗಳು ತಿಳಿಸಿವೆ.

Leave a Comment